HomePage_Banner
HomePage_Banner
HomePage_Banner

ಆಲಂತಾಯ: ವಿಶ್ವ ಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ವಿಶ್ವ ಪರಿಸರ ದಿನದ ಪ್ರಯುಕ್ತ ನೆಲ್ಯಾಡಿ ಸೂರ್ಯನಗರ ಶ್ರೀ ರಾಮ ವಿದ್ಯಾಲಯ ಕಾಂಚನ ಶ್ರೀ ವೆಂಕಟಸುಬ್ರಹ್ಮಣ್ಯ ಸ್ಮಾರಕ ಪ್ರೌಢಶಾಲೆಯ ಸಹಭಾಗಿತ್ವದಲ್ಲಿ ಆಲಂತಾಯದಲ್ಲಿ ಪುನರ್ ನಿರ್ಮಾಣಗೊಂಡ ಕೆರೆಯ ಸ್ಥಳ ವೀಕ್ಷಣೆ ಮತ್ತು ವೇದಕುಮಾರ್‌ರವರ ತೋಟದಲ್ಲಿ ಪರಿಸರ ಜಾಗೃತಿ ಸಭೆಯು ನಡೆಯಿತು.

ಸಭೆಯನ್ನು ಉದ್ದೇಶಿಸಿ ಶ್ರೀರಾಮ ವಿದ್ಯಾಲಯದ ಗೌರವಾಧ್ಯಕ್ಷ ಜಯಪ್ರಕಾಶ್‌ರವರು ಮಾತನಾಡಿ, ಜಲ ಪೂರಣ ವ್ಯವಸ್ಥೆ ಮತ್ತು ಪರಿಸರ ಸಂರಕ್ಷಣೆ ಪ್ರಸ್ತುತ ಸಮಯದಲ್ಲಿ ಅಗತ್ಯ ಇದೆ ಎಂದರು. ಕಾಂಚನ ಶಾಲೆಯ ಶಿಕ್ಷಕಿ ಜಯಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಂಚನ ಶಾಲೆಯ ಮುಖ್ಯಗುರು ಕೆದಿಲ ಸುಬ್ರಹ್ಮಣ್ಯ ಭಟ್‌ರವರು ಪರಿಸರ ರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಿದರು. ಸಭೆಯಲ್ಲಿ ಎರಡು ಶಾಲೆಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.