Home_Page_Advt
Home_Page_Advt
Home_Page_Advt

ಬನ್ನೂರು: ಶಾಸಕರ ಮಳೆಹಾನಿ ನಿಧಿಯಿಂದ ಕಾಲು ಸಂಕಕ್ಕೆ ತಡೆಗೋಡೆ ಕಾಮಗಾರಿ ಪ್ರಗತಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಶಾಸಕರ ಮಳೆ ಹಾನಿ ನಿಧಿಯಿಂದ ಬನ್ನೂರು ಶಾಲೆಗೆ ಹೋಗುವ ರಸ್ತೆಯಲ್ಲಿನ ಕಾಲು ಸಂಕಕ್ಕೆ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ನಗರಸಭೆ ಸದಸ್ಯೆ ಗೌರಿ ಬನ್ನೂರು ತಿಳಿಸಿದ್ದಾರೆ.

ಹಲವು ವರ್ಷಗಳ ವಾರ್ಡ್‌ನ ತಡೆಗೋಡೆಗೆ ಸಂಬಂಧಿಸಿದ ಬೇಡಿಕೆಯನ್ನು ಶಾಸಕ ಸಂಜೀವ ಮಠಂದೂರು ಅವರ ಮುಂದಿಟ್ಟಾಗ ಶಾಸಕರ ಮಳೆ ಹಾನಿ ನಿಧಿಯಿಂದ ಕಾಲು ಸಂಕಕ್ಕೆ ತಡೆಗೋಡೆ ನಿರ್ಮಾಣಕ್ಕೆ ರೂ. 2ಲಕ್ಷ ಅನುದಾನ ಮಂಜೂರುಗೊಳಿಸಿದ್ದರು. ಇದೀಗ ಕಾಮಗಾರಿ ಪ್ರಗತಿಯಲ್ಲಿದೆ. ಸಂಕದ ಎರಡೂ ಕಡೆಯಲ್ಲೂ ತಡೆಗೋಡೆ ನಿರ್ಮಾಣವಾಗಲಿದೆ. ಆದರೆ ಒಂದು ಬದಿಯಲ್ಲಿ ಪೂರ್ಣ ಕಾಂಕ್ರೀಟ್ ಆಗದ ವರದಿ ಪತ್ರಿಕೆಯಲ್ಲಿ ಬಂದಿತ್ತು. ಆದರೆ ಆ ಭಾಗದಲ್ಲಿ ಕಾಂಕ್ರೀಟ್ ಮಾಡಲು ಕಷ್ಟ ಸಾಧ್ಯವಾದ ಹಿನ್ನೆಲೆಯಲ್ಲಿ ಕೆಂಪು ಕಲ್ಲಿನಿಂದ ತಡೆಗೋಡೆ ನಿರ್ಮಾಣ ಆಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.