Home_Page_Advt
Home_Page_Advt
Home_Page_Advt

ಮುಕ್ರಂಪಾಡಿಸಿಂಹವನ-ಪಂಜಳ ಜನತೆಗೆ ಉದ್ಯಮಿ ರವೀಂದ್ರ ಶೆಟ್ಟಿ ನುಳಿಯಾಲುರವರಿಂದ ರಂಗಮಂಟಪ ಕೊಡುಗೆ-ಶಂಕುಸ್ಥಾಪನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಕ್ರಂಪಾಡಿ ಆನಂದಾಶ್ರಮ ಬಳಿಯ ಸಿಂಹವನ-ಪಂಜಳದಲ್ಲಿನ ಜನತೆಯ ರಂಗಮಂಟಪದ ಬಹುಬೇಡಿಕೆಯ ಕನಸು ಶೀಘ್ರದಲ್ಲಿಯೇ ನೆರವೇರಲಿದೆ.

ಹಲವಾರು ವರ್ಷಗಳಿಂದ ಕನಸು ಕಾಣುತ್ತಿರುವ ಸ್ಥಳೀಯ ಜನರ ಕನಸನ್ನು ಉದ್ಯಮಿ ಹಾಗೂ ಸಂಪ್ಯ ಆರ್ಯಾಪು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಶೀಘ್ರದಲ್ಲಿಯೇ ನನಸು ಮಾಡಲಿದ್ದಾರೆ. ಕೊಡುಗೈ ದಾನಿ ಆಗಿರುವ ರವೀಂದ್ರ ಶೆಟ್ಟಿಯವರು ತಮ್ಮದೇ ಖರ್ಚಿನಲ್ಲಿ ಮುಕ್ರಂಪಾಡಿ ಸಿಂಹವನ-ಪಂಜಳದಲ್ಲಿ ಸುಮಾರು 8 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ರಂಗಮಂಟಪದ ಶಂಕುಸ್ಥಾಪನೆ ಜೂ.೫ರಂದು ನೆರವೇರಿದೆ. ಉದ್ಯಮಿ ರವೀಂದ್ರ ಶೆಟ್ಟಿಯವರು ತೆಂಗಿನಕಾಯಿ ಒಡೆದು ರಂಗಮಂಟಪದ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯ ಶೀನಪ್ಪ ನಾಯ್ಕ, ಮಾಜಿ ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ, ಇಂಜಿನಿಯರ್ ಗಣೇಶ್ ಮೊಟ್ಟೆತ್ತಡ್ಕ, ಕಾಂಟ್ರಾಕ್ಟರ್ ಸುಧಾಕರ್(ತಮ್ಮಣ್ಣ) ರೈ ಮೊಟ್ಟೆತ್ತಡ್ಕ, ಚಂದ್ರನ್ ಸಿ.ಎಸ್ ಸಿಂಹವನ-ಪಂಜಳ, ನಾರಾಯಣ ನಾಕ್, ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲುರವರು ಉಪಸ್ಥಿತರಿದ್ದರು.
ಕ್ಯಾರಪ್-ಮೊರಾಸ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.