ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರೆ ಸಮಾಲೋಚನಾ ಸಭೆ: 10 ನೇ ವರ್ಷದ ಪಾದಯಾತ್ರೆ ಮನವಿ ಬಿಡುಗಡೆ ಗೊಳಿಸಿದ ಶಾಸಕ ಹರೀಶ್ ಪೂಂಜ

0


ಉಜಿರೆ : ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆಯಿಂದ ಪ್ರತಿ ವರ್ಷ ಹೊರಡುವ ಪಾದಯಾತ್ರೆ ದಶಮಾನೋತ್ಸವ ಪ್ರಯುಕ್ತ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಪಾದಯಾತ್ರೆ ಸಮಾಲೋಚನಾ ಸಭೆ ನ.1ರಂದು ನಡೆಯಿತು.

ಉಜಿರೆ ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡುವಟ್ನಾಯ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಹರೀಶ್ ಪೂಂಜಾ 10 ನೇ ವರ್ಷದ ಪಾದಯಾತ್ರೆ ಮನವಿ ಬಿಡುಗಡೆ ಗೊಳಿಸಿದರು . ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ನಿವೃತ್ತ ಪೊಲೀಸ್ ವರಿಷ್ಠಾ ಧಿಕಾರಿ ಪೀತಾಂಬರ ಹೇರಾಜೆ, ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್,ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್,ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ನಿಲಯಗಳ ಸಿ ಇ ಒ ಪೂರಾನ್ ವರ್ಮ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರು ಕೆ. ಮೋಹನ್ ಕುಮಾರ್, ರಾಜೇಶ್ ಪೈ, ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಸತೀಶ್ ಶೆಟ್ಟಿ, ವಿವಿಧ ಸಂಘ ಸಂಸ್ಥೆ ಗಳ ಮುಖಂಡರು, ತಾಲೂಕಿನ ಗಣ್ಯರು, ಯೋಜನೆಯ ಸಿಬ್ಬಂದಿಗಳು, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here