Home_Page_Advt
Home_Page_Advt
Home_Page_Advt

ನೀಟ್ ಪರೀಕ್ಷೆ: ನಿವೃತ್ತ ಬಿಇಒ ಈಶ್ವರ ಭಟ್ ರವರ ಮೊಮ್ಮಗ ಸಾರ್ಥಕ್ ಭಟ್ ಗೆ ದೇಶದಲ್ಲಿ 6 ನೇ ಸ್ಥಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶ ಪರೀಕ್ಷೆಯಾದ ನೀಟ್‌ನ ಫಲಿತಾಂಶ ಪ್ರಕಟವಾಗಿದ್ದು, ಪುತ್ತೂರಿನ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬನ್ನೂರು ನಿವಾಸಿಯಾಗಿದ್ದ ದಿ. ಕಡವ ಈಶ್ವರ ಭಟ್ ಅವರ ಮೊಮ್ಮಗ ಪುತ್ತೂರು ಮೂಲದ ಸಾರ್ಥಕ್ ಭಟ್ ದೇಶದಲ್ಲಿ 6ನೇ ಸ್ಥಾನ ಪಡೆದಿದ್ದಾರೆ.

ಬನ್ನೂರು ಕರ್ಮಲ ನಿವಾಸಿಯಾಗಿದ್ದ ದಿ. ಕಡವ ಈಶ್ವರ ಭಟ್ ಮತ್ತು ಸುಶಿಲಾ ಐ ಭಟ್ ದಂಪತಿಯ ಪುತ್ರಿ ಡಾ. ಚಿತ್ರಿಕಾ ಅವರು ವಿಟ್ಲ ಮೂಲದ ಬರೆಂಗೋಡಿ ದಂತ ವೈದ್ಯ ಡಾ. ರಾಘವೆಂದ್ರ ಅವರನ್ನು ವಿವಾಹವಾಗಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನೆಲೆಸಿದ್ದಾರೆ. ಅವರ ಪುತ್ರ ಅಲ್ಲಿಯೇ ತನ್ನ ಶಿಕ್ಷಣವನ್ನು ಮುಂದುವರಿಸಿಕೊಂಡಿದ್ದು, 2019ನೇ ಸಾಲಿನ ನೀಟ್ ಪರೀಕ್ಷೆಗೆ ಬರೆದಿದ್ದರು. ದೇಶಾದ್ಯಾಂತ ಸುಮಾರು 14.1 ಲಕ್ಷ ಮಂದಿ ಪರೀಕ್ಷೆ ಬರೆದಿದ್ದು, ಅದರಲ್ಲಿ ಶೇ.56.5ಉತ್ತೀರ್ಣಗೊಂಡಿದ್ದು, ಮಹರಾಷ್ಟ್ರದಲ್ಲಿ 2.0ಲಕ್ಷ ಮಂದಿ ಪರೀಕ್ಷೆ ಬರೆದಿದ್ದು, 81,171 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಪೈಕಿ ಸಾರ್ಥಕ್ ಅವರು 720 ಅಂಕಗಳಲ್ಲಿ 695 ಅಂಕ ಪಡೆದಿದ್ದು, ದೇಶದಲ್ಲಿ 6ನೇ ಸ್ಥಾನ ಪಡೆದಿದ್ದಾರೆ. ಅವರು ಮಹರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಪುತ್ತೂರಿನಲ್ಲೇ ಹುಟ್ಟಿದ್ದರು:
ಮೂಲತಃ ಪುತ್ತೂರಿನವರಾದ ಡಾ. ಚಿತ್ರಿಕಾ ಅವರು ನಾಸಿಕ್‌ನಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ. ಅವರ ಪತಿ ರಾಘವೇಂದ್ರ ಅವರು ದಂತ ವೈದ್ಯರಾಗಿದ್ದಾರೆ. ಚಿತ್ರಿಕಾ ಅವರು ತನ್ನ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಡೆದಿದ್ದು ಬಳಿಕ ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ವಿವಾಹ ಆದ ಬಳಿಕ ನಾಸಿಕ್‌ನಲ್ಲಿ ಪತಿಯೊಂದಿಗೆ ವಾಸ್ತವ್ಯ ಹೊಂದಿದ್ದರೂ ಪುತ್ರ ಸಾರ್ಥಕ್ ಭಟ್ ಅವರ ಹೆರಿಗೆಗಾಗಿ ತವರು ಮನೆಗೆ ಬಂದಿದ್ದ ಅವರು ಪುತ್ತೂರು ಧನ್ವಂತರಿ ಆಸ್ಪತ್ರೆಯಲ್ಲಿ ಸಾರ್ಥಕ್‌ಗೆ ಜನ್ಮ ನೀಡಿದ್ದರು. ದೂರದ ನಾಸಿಕ್‌ನಲ್ಲಿದ್ದರೂ ಆರು ತಿಂಗಳಿಗೊಮ್ಮೆ ಪುತ್ತೂರು ಮನೆಗೆ ಬಂದು ಹೋಗುವುದಾಗಿ ಡಾ. ಚೈತ್ರಿಕಾ ತಿಳಿಸಿದ್ದಾರೆ.

ಹೃದ್ರೋಗ ತಜ್ಞರಾಗುವ ಗುರಿ:
ಸಾರ್ಥಕ್ ಭಟ್ ಅವರು ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದು, ರಾಷ್ಟ್ರಮಟ್ಟದ ಬಯೋಲಜಿ ಒಲಂಪಿಯಟ್‌ನಲ್ಲಿ ಉತ್ತಮ ರ್‍ಯಾಂಕ್ ಗಳಿಗೆ, ಟಾಟಾ ಇನ್ಸ್ಟಿಟ್ಯೂಟ್  ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ 10 ದಿನಗಳ ಶಿಬಿರಕ್ಕೂ ಆಯ್ಕೆಯಾಗಿ ಚಿನ್ನದ ಪದಕ ಪಡೆದಿರುತ್ತಾರೆ. ರಾಷ್ಟ್ರದ ಕೆ.ವಿ.ಪಿ.ವೈ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಫಿಲೋಶಿಫ್ ಗೆ ಅರ್ಹನಾಗಿದ್ದಾನೆ. ಇದರ ಜೊತೆ ಕಲೆಯಲ್ಲೂ ಹೆಚ್ಚಿನ ಆಸಕ್ತಿ ವಹಿಸಿಕೊಂಡು ಶಾಸ್ತ್ರೀಯ ಸಂಗೀತ, ತಬಲ ವಾದನವನ್ನು ಅಭ್ಯಾಸಿಸುತ್ತಿದ್ದು, ಉತ್ತಮ ಬ್ಯಾಡ್ಮಿಂಟನ್ ಆಟಗಾರ. ಇದೀಗ ನೀಟ್ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಸಾರ್ಥಕ್ ಮುಂದೆ ಹೃದ್ರೋಗ ತಜ್ಞರಾಗುವ ಆಸೆಯನ್ನು ಇಟ್ಟು ಕೊಂಡಿದ್ದಾರೆ ಎಂದು ಅವರ ತಾಯಿ ಚೈತ್ರಿಕಾ ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.