Home_Page_Advt
Home_Page_Advt
Home_Page_Advt

ಆನಂದಾಶ್ರಮದಲ್ಲಿ ಎಂ.ಫ್ರೆಂಡ್ಸ್ ವತಿಯಿಂದ ಈದ್ ಮಿಲನ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಈದ್-ಉಲ್ ಫಿತ್ರ್ ಹಬ್ಬದ ದಿನ ಬಡವರ ಮನೆಗೆ ಅಕ್ಕಿಯನ್ನು ತಲುಪಿಸುವುದು ಕಡ್ಡಾಯ ಕ್ರಮವಾಗಿದೆ. ತಂದೆ-ತಾಯಿಯನ್ನು ಗೌರವಿಸುವ ಕೆಲಸ ಮಾಡಬೇಕು. ಅವರ ಜತೆ ಕೃತಜ್ಞತೆ ಭಾವದಿಂದ ವರ್ತಿಸಬೇಕು ಎಂದು ಇಸ್ಲಾಂ ಕಲಿಸುತ್ತದೆ. ಮಾನವೀಯತೆ ಗುಣವನ್ನು ಬೆಳೆಸಿಕೊಂಡಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಅಶಾಂತಿಯನ್ನು ಇಸ್ಲಾಂ ಎಂದು ಪ್ರೋತ್ಸಾಹಿಸುವುದಿಲ್ಲ. ಎಲ್ಲಾ ಧರ್ಮವೂ ಸಮಾನತೆ, ಶಾಂತಿ, ಸೌಹಾರ್ದತೆಯನ್ನು ಭೋಧಿಸುತ್ತದೆ. ಅವುಗಳನ್ನು ಅರ್ಥಮಾಡಿಕೊಂಡಾಗ ಯಾವುದೇ ಸಮಸ್ಯೆ ಬರಲು ಸಾಧ್ಯವಿಲ್ಲ ಎಂದು ಕುಂಬ್ರ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಪ್ರೊಫೆಸರ್ ಅನೀಸ್ ಕೌಸರಿ ಹೇಳಿದರು.

ಅವರು ಜೂ.6ರಂದು ಮಂಗಳೂರು ಎಂ.ಫ್ರೆಂಡ್ಸ್ ವತಿಯಿಂದ ಪುತ್ತೂರು ಆನಂದಾಶ್ರಮದಲ್ಲಿ ಆಯೋಜಿಸಲಾದ ‘ಈದ್ ಮಿಲನ್ 2019’ ಕಾರ್ಯಕ್ರಮದಲ್ಲಿ ಈದ್ ಸಂದೇಶ ನೀಡುತ್ತಾ ಮಾತನಾಡಿದರು.

ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸಮಾರಂಭದ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭ ಆನಂದಾಶ್ರಮಕ್ಕೆ ಧನಸಹಾಯ ವಿತರಿಸಲಾಯಿತು. ಆನಂದಾಶ್ರಮದ ಅಧ್ಯಕ್ಷರು, ಪುತ್ತೂರಿನ ಪ್ರಸಿದ್ಧ ಹಿರಿಯ ವೈದ್ಯರಾದ ಡಾ.ಗೌರಿ ಪೈ ಅವರನ್ನು ಸನ್ಮಾನಿಸಲಾಯಿತು.

ಆನಂದಾಶ್ರಮದ ಅಧ್ಯಕ್ಷರಾದ ಡಾ.ಗೌರಿ ಪೈ ಮಾತನಾಡಿ ಎಂ ಫ್ರೆಂಡ್ಸ್ ನಿಂದ ದಯೆ ತೋರಿಸುವ ಕಾರ್ಯಗಳು ನಡೆಯುತ್ತಿದೆ. ನಿರಂತರವಾಗಿ ಬಡವರ ಮೇಲೆ ಕರುಣೆ ತೋರುವ ಅವರ ಕಾರ್ಯ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.

ಎಂ.ಫ್ರೆಂಡ್ಸ್ ಕೋಶಾಧಿಕಾರಿ ಅಬೂಬಕರ್ ನೋಟರಿ, ಆನಂದಾಶ್ರಮ ಸೇವಾ ಟ್ರಸ್ಟ್ ನಿರ್ದೇಶಕರಾದ ವಸಂತ ಕುಮಾರ್ ರೈ, ಸದಾಶಿವ ಪೈ, ಶಾಂತರಾಮ ರಾವ್, ವೇಣುಗೋಪಾಲ ಶೆಣೈ, ಎಂ.ಫ್ರೆಂಡ್ಸ್ ಟ್ರಸ್ಟಿಗಳಾದ ಸಾದಿಕ್ ಕೆ.ಪಿ. ಪುತ್ತೂರು, ಪುತ್ತಾಕ ಉಪ್ಪಿನಂಗಡಿ, ಹನೀಫ್ ಕುದ್ದುಪದವು, ಹಾರಿಸ್ ಕಾನತ್ತಡ್ಕ, ಪುತ್ತೂರು ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್, ಆರಿಫ್ ಬೆಳ್ಳಾರೆ, ಆಶಿಕ್ ಕುಕ್ಕಾಜೆ, ಇಸ್ಮಾಯಿಲ್ ಕೋಲ್ಪೆ, ರಫೀಕ್ ನೆಟ್ಲ ಉಪಸ್ಥಿತರಿದ್ದರು. ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಅಡ್ವಕೇಟ್ ಶಾಕಿರ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಕಲಂದರ್ ಪರ್ತಿಪ್ಪಾಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.