HomePage_Banner
HomePage_Banner
HomePage_Banner
Breaking News

ಉಪ್ಪಿನಂಗಡಿ ‘ವಿವಾ ಫ್ಯಾಶನ್’ ಲಕ್ಕಿ ಕೂಪನ್ – ಕೊಣಾಲು ಯೂಸುಫ್‌ರಿಗೆ ಒಲಿದ ಅಲ್ಟೋ ಕಾರು

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ವಸ್ತ್ರ ಮಳಿಗೆ ವಿವಾ ಫ್ಯಾಶನ್ ತನ್ನ ವಿಸ್ತರಿತ ಕಟ್ಟಡ ಉದ್ಘಾಟನಾ ಸಮಾರಂಭದ ಸಲುವಾಗಿ ವಿಶೇಷ ಆಫರ್ ಆಗಿ ಪ್ರಕಟಿಸಿದ್ದ ಬಹುಮಾನ ಯೋಜನೆಯ ಡ್ರಾದಲ್ಲಿ ಪ್ರಥಮ ಬಹುಮಾನ ಅಲ್ಟೋ ಕಾರು ಕೊಣಾಲು ಗ್ರಾಮದ ಕೊಂಬಯಿನ ಹೌಸ್ ಯೂಸುಫ್‌ರವರಿಗೆ ಒಳಿದಿದ್ದು, ಇದರ ಹಸ್ತಾಂತರ ಸಮಾರಂಭ ಜೂ. 4ರಂದು ಜರಗಿತು.

ವಿವಾ ಫ್ಯಾಶನ್ ಫೆಬ್ರವರಿ ತಿಂಗಳಲ್ಲಿ ನಡೆಸಿದ ತನ್ನ ವಿಸ್ತರಿತ ಮಳಿಗೆ ಉದ್ಘಾಟನಾ ಸಮಾರಂಭದಿಂದ ವಿಶೇಷ ಆಫರ್ ಆಗಿ 1 ಸಾವಿರ ರೂಪಾಯಿಗಿಂತ ಅಧಿಕ ಬಟ್ಟೆ ಖರೀದಿ ಮಾಡಿದ ಗ್ರಾಹಕರಿಗೆ ಲಕ್ಕಿ ಡ್ರಾ ಕೂಪನ್ ನೀಡಿತ್ತು. ಅದರ ಡ್ರಾ ಜೂನ್ 4ರಂದು ನಡೆದು, ಅದರ ಬಹುಮಾನ ಅಲ್ಟೋ ಕಾರು ಕೊಣಾಲು ಗ್ರಾಮದ ಕೊಂಬಯಿನ ಹೌಸ್ ಯೂಸುಫ್‌ರವರ ನಂಬರಿಗೆ ಡ್ರಾ ಆಗಿತ್ತು.

ಕಾರು ಹಸ್ತಾಂತರ ಕಾರ್ಯಕ್ರಮ ಜೂನ್ ೪ರಂದು ನಡೆದು ಸಂಸ್ಥೆಯ ಆಡಳಿತ ಪಾಲುದಾರ ಇಮ್ತಿಯಾಝ್ ಕಾರಿನ ಕೀಯನ್ನು ಕಾರು ವಿಜೇತ ಯೂಸುಫ್‌ರವರಿಗೆ ಹಸ್ತಾಂತರಿಸಿದರು. ಸಮಾರಂಭದಲ್ಲಿ ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಅಗ್ನಾಡಿ ಹಾರೂನ್ ರಶೀದ್, ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಶೀಫ್, ಉದ್ಯಮಿಗಳಾದ ಸಿರಾಜುದ್ದೀನ್ ಆರ್.ಕೆ., ಶಬ್ಬೀರ್ ಕೆಂಪಿ, ವರಪ್ರಸಾದ್ ಉಪಸ್ಥಿತರಿದ್ದರು. ಸಂಸ್ಥೆಯ ಸಿದ್ದಿಕ್ ಕೊಂತೂರು ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.