ಬೆಳ್ತಂಗಡಿ  ಶ್ರೀ ಧ. ಮ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಲಿಯೋ ಜಾಗೃತಿ ಅಭಿಯಾನ

0

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯ ರೆಡ್ ಕ್ರಾಸ್ ಹಾಗೂ ಇಂಟರ್ ಆಕ್ಟ್ ಕ್ಲಬ್ ನಿಂದ ಪೋಲಿಯೋ ಜಾಗೃತಿ ಅಭಿಯಾನವು ನಡೆಯಿತು.

ಬೆಳ್ತಂಗಡಿ ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ| ರೋ ಶಶಿಕಾಂತ್ ಡೊಂಗ್ರೆ ಪೋಲಿಯೋ ದ ಬಗ್ಗೆ ಮಕ್ಕಳಿಗೆ ವಿವರಿಸಿದರು. ಒಂದರಿಂದ ಐದು ವರ್ಷದ ಒಳಗಿನ ಮಕ್ಕಳಲ್ಲಿ ಪೋಲಿಯೋ ದ ಲಕ್ಷಣಗಳ ಬಗ್ಗೆ ವಿವರಿಸಿ ತಿಳಿಯ ಪಡಿಸಿದರು.

ರೋಟರಿ ಕ್ಲಬ್ ನ ಕಾರ್ಯದರ್ಶಿ ರಕ್ಷಾ ರಾಘನೇಷ್ , ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ. ಆರ್. ಉಪಸ್ಥಿತರಿದ್ದರು. ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್ ಶ್ರೀಮತಿ ಪ್ರಮೀಳಾ, ಸಹಾಯಕ ಮಂಜುನಾಥ್, ಇಂಟರ್ ಆಕ್ಟ್ ಕ್ಲಬ್ ಸಂಯೋಜಕ ಶಿಕ್ಷಕಿ ಶ್ರೀಮತಿ ಚೇತನ ಉಪಸ್ಥಿತರಿದ್ದರು . ಶ್ರೀಮತಿ ಪ್ರಮೀಳಾ ಸ್ವಾಗತಿಸಿ ನಿರೂಪಿಸಿದರು. ಚೇತನ ವಂದಿಸಿದರು.

LEAVE A REPLY

Please enter your comment!
Please enter your name here