HomePage_Banner
HomePage_Banner
HomePage_Banner

ಹಿಂದೂ ಸಂಘಟನೆಯ ಕಾರ್ಯಕರ್ತ ಶಿವು ಉಪ್ಪಾರ್ ಹತ್ಯೆ ಖಂಡಿಸಿ ಹಿಂ.ಜಾ.ವೇ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

  • ಸತ್ಯದ ಹಾದಿಯ ತನಿಖೆಗೆ ಸ್ವಾಗತ, ಇಲ್ಲವಾದರೆ ಹೋರಾಟ – ಉಲ್ಲಾಸ್ ಕೆ.ಟಿ
  • ಹಿಂದೂ ಪರಿವಾರ ಸಂಘಟನೆ ಕೈಕಟ್ಟಿ ಕೂತಿಲ್ಲ – ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಹಿಂದೂ ಸಂಘಟನೆಯ ಕಾರ್ಯಕರ್ತ ಬೆಳಗಾವಿಯ ಶಿವು ಉಪ್ಪಾರ್‌ರವರ ಹತ್ಯೆ ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆ ಎದುರು ಜೂ.6ರಂದು ಸಂಜೆ ಪ್ರತಿಭಟನೆ ನಡೆಯಿತು.

ಬೆಳಗಾವಿ ಜಿಲ್ಲೆಯ ಬಾಗೇವಾಡಿ ಬಸ್ ನಿಲ್ದಾಣದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರಾಗಿದ್ದ ಶಿವು ಉಪ್ಪಾರ್ ಅವರನ್ನು ಗೋ ಕಳ್ಳರು ಅಮಾನುಷವಾಗಿ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ ಈ ಪ್ರಕರಣವನ್ನು ರಾಜ್ಯ ಸಮ್ಮಿಶ್ರ ಸರ್ಕಾರ ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ಪ್ರಕರಣದ ಅರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು.

ಸತ್ಯದ ಹಾದಿಯ ತನಿಖೆಗೆ ಸ್ವಾಗತ, ಇಲ್ಲವಾದರೆ ಹೋರಾಟ: ಹಿಂದೂ ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ಉಲ್ಲಾಸ್ ಕೆ.ಟಿ. ಮಾತನಾಡಿ ಶಿವು ಉಪ್ಪಾರ್ ಅವರಿಗೆ ಅನೇಕ ಬಾರಿ ಬೆದರಿಕೆ ಕರೆ ಬಂದಿದೆ. ಅಂತಹ ಪರಿಸ್ಥಿತಿಯಲ್ಲಿ ಎದೆಗುಂದದ ಆ ಯುವಕ ಧೈರ್ಯದಿಂದ ಕಾರ್ಯಾಚರಣೆ ಮಾಡುತ್ತಿದ್ದ. ಇಂತಹ ಸಂದರ್ಭದಲ್ಲಿ ಆತ ಆತ್ಮಹತ್ಯೆ ಮಾಡಬೇಕಾದರೆ ಗೋಕಾಕ್‌ನಿಂದ ದೂರ ಹೋಗಿ ಆತ್ಮಹತ್ಯೆ ಮಾಡಬೇಕಾಗಿರಲಿಲ್ಲ. ಜೊತೆಗೆ ವೈದ್ಯಕೀಯ ವರದಿಯಲ್ಲೂ ಆತ್ಮಹತ್ಯೆಯಲ್ಲ ಎಂದು ಸ್ಪಷ್ಟವಾಗಿದೆ ಎಂದರು. ಗೋರಕ್ಷಣೆಗೆ ಹೋದವರನ್ನು ಸರಕಾರ ಮತ್ತು ಇಲಾಖೆ ದಮನ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಇನ್ನು ಮೂರು-ನಾಲ್ಕು ದಿನದಲ್ಲಿ ಇಲಾಖೆ ಯಾವ ರೀತಿ ತನಿಖೆ ಕೊಂಡೊಯ್ಯುತ್ತದೆ ಎಂದು ನೋಡುತ್ತೇವೆ. ತನಿಖೆ ಸತ್ಯದ ಹಾದಿಯಲ್ಲಿ ಹೋದರೆ ಸ್ವಾಗತ ಮಾಡುತ್ತೇವೆ. ಇಲ್ಲದಿದ್ದರೆ ದೊಡ್ಡ ಪ್ರಮಾಣದ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

  • ವಾರದೊಳಗೆ ನ್ಯಾಯ ಸಿಗಬೇಕು. ಹೋರಾಟ ಸಂಘರ್ಷದ ಹಂತಕ್ಕೆ ತಲುಪುವ ಮೊದಲು ನ್ಯಾಯ ಸಿಗಬೇಕು. ಶಿವು ಉಪ್ಪಾರ್ ಹೆಸರಿನಲ್ಲೇ ಸರಕಾರ ಪತನ ಆಗಲೂ ಸಾಧ್ಯವಿದೆ. ಸಂಘರ್ಷಕ್ಕೂ ಹೋರಾಟಕ್ಕೂ ಸಿದ್ಧರಾಗಿ. ಇದು ಸಾಂಕೇತಿಕ ಪ್ರತಿಭಟನೆ. ಎಚ್ಚರಿಕೆ ಇರಲಿ ಅರುಣ್ ಕುಮಾರ್ ಪುತ್ತಿಲ

ಹಿಂದೂ ಪರಿವಾರ ಸಂಘಟನೆ ಕೈಕಟ್ಟಿ ಕೂತಿಲ್ಲ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಹಿಂದೂ ಸಮಾಜಕ್ಕಾಗಿ ಶಕ್ತಿ ಕೊಡಲು ಒಬ್ಬ ಎಳೆಯ ಕಾರ್ಯಕರ್ತ ಕಾರ್ಯಾಚರಣೆ ಮಾಡುತ್ತಿರುವುದನ್ನು ಸಹಿಸದ ಮತಾಂಧರು ಆತನನ್ನು ಹತ್ಯೆ ಮಾಡಿದ್ದಾರೆ. ಹತ್ಯೆಯ ಕುರಿತು ಕರ್ನಾಟಕ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಗೆ ಗೊತ್ತಿದೆ. ಆದರೆ ಅವರು ಮತಾಂಧರ ಜೊತೆ ಕೈಜೋಡಿಸಿದ್ದಾರೆ. ಶಿವು ಉಪ್ಪಾರ್ ಅವರು ಹತ್ಯೆಯಾಗುವ ಮೊದಲು ಮತಾಂಧರು ಆತನ ಜೊತೆ ಸಂಭಾಷಣೆ ಮಾಡಿದ ದಾಖಲೆ ವೈರಲ್ ಆಗಿದೆ. ಇವೆಲ್ಲ ಇಲಾಖೆಗೆ ಗೊತ್ತಿದ್ದರೂ ಯಾವ ತನಿಖೆಯನ್ನೂ ಕೈಗೆತ್ತಿಕೊಂಡಿಲ್ಲ. ಹಾಗೆಂದು ಹಿಂದೂ ಪರಿವಾರ ಸಂಘಟನೆ ಕೈಕಟ್ಟಿ ಕೂತುಕೊಳ್ಳುವುದಿಲ್ಲ. ಹತ್ಯೆಯ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಮತ್ತು ಶಿವು ಉಪ್ಪಾರ್ ಅವರ ಕುಟುಂಬಕ್ಕೆ ರೂ. 20 ಲಕ್ಷ ಪರಿಹಾರ ನೀಡಬೇಕೆಂದು ಹೇಳಿದರು.

ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ತಾಲೂಕು ಘಟಕದ ಕಾರ್ಯದರ್ಶಿ ಚಿನ್ಮಯ್ ರೈ, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಹಿಂಜಾವೆಯ ರವಿರಾಜ್ ಕಡಬ, ತಾಲೂಕು ಪ್ರಖಂಡದ ಹರೀಶ್ ದೋಳ್ಪಾಡಿ, ಶರತ್ಚಂದ್ರ, ಬಜರಂಗದಳದ ಜಯಂತ್, ರಾಜೇಶ್ ಪಂಚೋಡಿ, ಅಶೋಕ್ ತ್ಯಾಗರಾಜನಗರ, ದಿನೇಶ್ ಪುರುಷರಕಟ್ಟೆ, ರಾಕೇಶ್ ಓಜಾಲ, ನ್ಯಾಯವಾದಿ ಜಯಾನಂದ, ಮನೀಷ್ ಕುಲಾಲ್, ಮನೀಷ್ ಪೂಜಾರಿ, ಶಶಾಂತ್ ಕುಲಾಲ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಹಿಂದೂ ಜಾಗರಣಾ ವೇದಿಕೆ ವಿಟ್ಲ ಪ್ರಖಂಡದ ಮುಖಂಡ ನರಸಿಂಹ ಮಾಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.