ಉಜಿರೆ ಶ್ರೀಧ.ಮಂ.ಅ .ಸೆಕೆಂಡರಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಉಜಿರೆ : ಉಜಿರೆ ಶ್ರೀ ಧ. ಮ. ಸೇಕೆಂಡರಿ ಶಾಲೆಯಲ್ಲಿ ನ.1 ರಂದು ರಾಜ್ಯೋತ್ಸವವನ್ನು ವಿಶ್ವೇಶ್ವರ ಭಟ್ ಕನ್ನಡ ಬಾವುಟವನ್ನು ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯೊಂದಿಗೆ ಶಿಕ್ಷಕ  ರಂಜಿತ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ತ್ರಿವೇಣಿ ರವರು ಪ್ರಾಸ್ತಾವಿಕ ಮಾತನ್ನಾಡಿದರು. ಶಿಕ್ಷಕಿ  ಲಲಿತಾ ರವರು ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರ ಕನ್ನಡ ಗೀತ ಗಾಯನ ಸುಶ್ರಾವ್ಯವಾಗಿ ನಡೆದು, ಶಿಕ್ಷಕ ರಮೇಶ್ ಮಯ್ಯ “ಮಗುವಿಗೊಂದು ಪುಸ್ತಕ”ವೆಂಬ ವಿಷಯದ ಕುರಿತು ಪ್ರಾಸ್ತಾವಿಕ ನುಡಿಯನ್ನು ಗೈಯುವುದರ ಮೂಲಕ , ಶಿಕ್ಷಕ ಸುರೇಶ್ ರವರು ಕನ್ನಡ ನಾಡಿನ ಅಭಿಮಾನದ ಮಾತುಗಳನ್ನಾಡಿದರು.

ಮುಖ್ಯ ಅತಿಥಿ  ವಿಶ್ವೇಶ್ವರ ಭಟ್ ರವರು ಕನ್ನಡ ಕಾವ್ಯ ಪರಂಪರೆ ಬೆಳೆದು ಬಂದ ರೀತಿ ಹಾಗೂ ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಪದ್ಮರಾಜ್ ವಹಿಸಿದ್ದರು . ಶಿಕ್ಷಕಿ ಸಂಗೀತ ರವರು ಧನ್ಯವಾದ ಸಮರ್ಪಿಸಿದರು. ಶಿಕ್ಷಕ ಚಂದ್ರಶೇಖರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here