HomePage_Banner
HomePage_Banner
HomePage_Banner

ಕ್ಯಾಂಪ್ಕೋ: ಐತಿಹಾಸಿಕ ದಾಖಲೆಯ 1878 ಕೋಟಿ ರೂ. ವ್ಯವಹಾರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಸಾಲಿನಲ್ಲಿ ೧೮೭೮ ಕೋಟಿ ರೂಪಾಯಿ ವ್ಯವಹಾರ ಮಾಡುವ ಮೂಲಕ ಕ್ಯಾಂಪ್ಕೋ ಸಂಸ್ಥೆಯು ವ್ಯವಹಾರದಲ್ಲಿ ಹೊಸ ದಾಖಲೆ ನಿರ್ಮಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್‌ಚಂದ್ರ ತಿಳಿಸಿದರು. ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉzಶಿಸಿ ಮಾತನಾಡಿ ೧೫೮೯.೧೫ ಕೋಟಿ ರೂಪಾಯಿಗಳ ಮೌಲ್ಯದ ೫೭೨೦೯.೬೪ ಮೆ.ಟನ್ ಅಡಿಕೆಯನ್ನು ಖರೀದಿಸಿದ್ದು, ಇವುಗಳಲ್ಲಿ ೮೮೨.೬೧ ಕೋಟಿ ರೂ. ಮೌಲ್ಯದ ೨೭೩೬೨.೯೦ ಮೆ.ಟನ್ ಕೆಂಪಡಿಕೆ ಮತ್ತು ೭೦೬.೫೪ ಕೋಟಿ ರೂ. ಮೌಲ್ಯದ ೨೯೮೪೬.೭೪ ಮೆ.ಟನ್ ಬಿಳಿ ಅಡಿಕೆ ಒಳಗೊಂಡಿದೆ. ೮೨೬.೦೩ ಕೋಟಿ ರೂ ಮೌಲ್ಯದ ೨೫೦೬೬.೫೭ಮೆ.ಟನ್ ಕೆಂಪಡಿಕೆ ಮತ್ತು ೭೬೭.೩೭ ಕೋಟಿ ರೂಪಾಯಿ ಮೌಲ್ಯದ ೨೯೭೦೦.೭೩ ಮೆ.ಟನ್ ಬಿಳಿ ಅಡಿಕೆ ಸೇರಿದಂತೆ ಒಟ್ಟು ೧೫೯೩.೪೦ಕೋಟಿ ರೂಪಾಯಿಗಳ ಮೌಲ್ಯದ ೫೪೭೬೭.೩೦ ಮೆ.ಟನ್ ಅಡಿಕೆಯನ್ನು ಮಾರಾಟ ಮಾಡಿರುತ್ತದೆ ಎಂದು ತಿಳಿಸಿದ ಸತೀಶ್ಚಂದ್ರರವರು, ಕಳೆದ ವರ್ಷ ೪ ತಿಂಗಳುಗಳ ಕಾಲ ಅವಿರತ ಮಳೆಯಿಂದಾಗಿ ರೈತರಿಗೆ ತೊಂದರೆಯಾದ ಕಾರಣ ಸುಮಾರು ೧೪೨ ಮೆ.ಟನ್ ಮೈಲುತುತ್ತನ್ನು ರಿಯಾಯಿತಿ ದರದಲ್ಲಿ ನೀಡಲಾಗಿದೆ. ಅಡಿಕೆ, ಕೊಕ್ಕೋ, ರಬ್ಬರ್ ಕಾಳುಮೆಣಸು ಕೃಷಿಗಳಿಗೆ ಈ ವರ್ಷವೂ ರಿಯಾಯಿತಿ ದರದಲ್ಲಿ ಸರಬರಾಜು ಮಾಡಲಾಗುವುದು ಎಂದು ಹೇಳಿದರು.

ಕೃಷಿ ಕಾರ್ಮಿಕರ ಕೊರತೆಯನ್ನು ಮನಗಂಡು ವಿಟ್ಲದಲ್ಲಿ ಅಡಿಕೆ ಮರ ಏರುವ ತರಬೇತಿ (ಕೌಶಲ್ಯಪಡೆ) ಸಿಪಿಸಿಆರ್‌ಐ ಯವರ ಸಹಭಾಗಿತ್ವದೊಂದಿಗೆ ನೀಡಲಾಯಿತು. ಇದರಿಂದಾಗಿ ೧೩೦ ಜನ ತರಬೇತಿಗೊಂಡು ಅಡಿಕೆ ಬೆಳೆಗಾರರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದ್ದು ಈ ವರ್ಷ ಪೆರ್ಲ ಮತ್ತು ಪಂಜದಲ್ಲಿ ತರಬೇತಿ ಕಾರ್ಯಾಗಾರ ಮಾಡಲಾಗುವುದು. ಪುತ್ತೂರಿನಲ್ಲಿ ಮೆಗಾ ಕೃಷಿ ಮೇಳವನ್ನು ಆಯೋಜಿಸುವ ಮೂಲಕ ಕೃಷಿಯಲ್ಲಿ ಹೊಸ ಹೊಸ ಅನ್ವೇಷಣೆಗಳನ್ನು ಜನರಿಗೆ ಪರಿಚಯಿಸಿದ್ದು ಇದರಿಂದ ಹೊಸ ಪೀಳಿಗೆಯ ರೈತರಿಗೆ ಆಸಕ್ತಿ ಹುಟ್ಟಿಸುವ ಕಾರ್ಯವನ್ನು ಮಾಡಲಾಗಿದೆ. ಎಂದು ತಿಳಿಸಿದ ಅವರು, ಕ್ಯಾಂಪ್ಕೋ ಸದಸ್ಯ ಕೃಷಿಕರಿಗೆ ಸಂಸ್ಥೆಯ ಸಾಮಾಜಿಕ ಸೇವಾ ಯೋಜನೆಗಳನ್ವಯ ಕಿಡ್ನಿ ಟ್ರಾನ್ಸ್‌ಫರ್‌ಗೆ ೧ಲಕ್ಷ ಹಾಗೂ ಹೃದಯ ಶಸ್ತ್ರ ಚಿಕಿತ್ಸೆಗೆ ರೂ ೫೦೦೦೦, ಡಯಾಲಿಸಿಸ್‌ಗೆ ೫೦೦೦ ನೀಡುತ್ತಿದ್ದು ಈ ವರ್ಷದಿಂದ ಡಯಾಲಿಸಿಸ್‌ಗೆ ೧೦೦೦೦ ನೀಡಲಾಗುವುದು. ಕಳೆದ ಸಾಲಿನಲ್ಲಿ ಒಟ್ಟು ೩೧ ಫಲಾನುಭವಿ ಸದಸ್ಯ ಬೆಳೆಗಾರರಿಗೆ ಆರ್ಥಿಕ ಸಹಾಯವನ್ನು ಒದಗಿಸಲಾಗಿದ್ದು ೧೯ ಸದಸ್ಯರಿಗೆ ತೆರೆದ ಹೃದಯ ಚಿಕಿತ್ಸೆಗಾಗಿ ಮತ್ತು ೧೨ ಜನ ಸದಸ್ಯರಿಗೆ ಡಯಾಲಿಸಿಸ್‌ಗಾಗಿ ನೆರವು ನೀಡಲಾಗಿದೆ ಎಂದು ಹೇಳಿದರು.

ಚಾಕಲೇಟು ಕಾರ್ಖಾನೆಯ ಒಟ್ಟು ಉತ್ಪಾದನೆಯ ಪ್ರಮಾಣ ೧೪೬೦೬ಮೆ.ಟನ್ ಮತ್ತು ಅದರಲ್ಲಿ ೧೦೦೪೨.೪೧ ಮೆ.ಟನ್ ಕ್ಯಾಂಪ್ಕೋ ಬ್ರಾಂಡಿನ ಚಾಕಲೇಟ್ ಉತ್ಪಾದನೆಯಾಗಿದ್ದು ೧೯೩ ಕೋಟಿ ರೂಪಾಯಿಗಳ ಚಾಕಲೇಟ್ ಮತ್ತು ಕೊಕ್ಕೋ ಕೈಗಾರಿಕೋತ್ಪಾನ್ನಗಳು ಮಾರಾಟವಾಗಿದ್ದು ಇದರಲ್ಲಿ ೧೬.೭೫ ಕೋಟಿ ರೂಪಾಯಿಗಳ ಮೌಲ್ಯದ ೧೧೦೬ಮೆ.ಟನ್ ರಫ್ತು ಒಳಗೊಂಡಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಈ ಸಂಸ್ಥೆಯು ೨೭.೧೧ ಕೋಟಿ ಮೌಲ್ಯದ ೨೨೪೯.೬೫ ಮೆ.ಟನ್ ರಬ್ಬರ್, ೨೩.೭೧ ಕೋಟಿ ರೂ. ಮೌಲ್ಯದ ಕಾಳು ಮೆಣಸನ್ನು ಖರೀದಿಸಿದ್ದು, ೨೭.೬೪ ಕೋಟಿ ಮೌಲ್ಯದ ೨೨೪೭.೭೨ ಮೆ.ಟನ್ ರಬ್ಬರ್ ಹಾಗೂ ೧೮.೩೭ ಕೋಟಿ ರೂ. ಮೌಲ್ಯದ ೫೧೮.೩೨ ಮೆ.ಟನ್ ಕಾಳು ಮೆಣಸನ್ನು ಮಾರಾಟ ಮಾಡಿರುತ್ತದೆ. ಅಡಿಕೆ ತೋಟದಲ್ಲಿ ಮಿಶ್ರ ಬೆಳೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸದಸ್ಯರಿಗೆ ೩೦೦೦೦ ಕಾಳುಮೆಣಸು ಸಸಿಗಳನ್ನು ವಿತರಿಸಲಾಗಿದೆ.

ಚಾಕಲೇಟ್ ಚಿಪ್ಸ್‌ಗೆ ಸಾಕಷ್ಟು ಬೇಡಿಕೆಯಿದ್ದು ಟರ್ಕಿ ದೇಶದ ಆಧುನಿಕ ತಂತ್ರಜ್ಞಾನದ ಯಂತ್ರವನ್ನು ಅಳವಡಿಸಲಾಗಿದೆ. ಕಾವು ಎಂಬಲ್ಲಿ ಆಧುನಿಕ ಮಾಸ್ಟರ್ ಗೋಡೌನ್‌ನ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. ಬೇರೆ ದೇಶಗಳಿಂದ ಅಧಿಕೃತವಾಗಿ ಆಮದುಗೊಳ್ಳುತ್ತಿರುವ ಕಳಪೆ ಅಡಿಕೆ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳುವಂತೆ ನಿಯೋಗದ ಮೂಲಕ ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದು ಬಹುತೇಕ ಫಲಪ್ರದವಾಗಿದೆ. ಆದರೆ ಅನಧಿಕೃತವಾಗಿ ಇನ್ನೂ ವ್ಯವಹಾರವು ನಡೆಯುತ್ತಿದ್ದು ಇದನ್ನು ಹತೋಟಿಗೆ ತರುವಲ್ಲಿ ಪ್ರಯತ್ನಿಸಲಾಗುವುದು. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ವಾಣಿಜ್ಯ ಸಚಿವ ಮತ್ತು ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಲು ದ.ಕ, ಉಡುಪಿ, ಚಿಕ್ಕಮಗಳೂರು ಸಂಸದರ ಜೊತೆ ಡೆಲ್ಲಿಗೆ ೨೪ ತಾರೀಖಿಗೆ ನಿಯೋಗವೊಂದು ತೆರಳಲಿದೆ ಎಂದು ಎಸ್.ಆರ್. ಸತೀಶ್ಚಂದ್ರರವರು ತಿಳಿಸಿದರು.

ಉಪಾಧ್ಯಕ್ಷ ಶಂಕರ್ ನಾರಾಯಣ ಭಟ್ ಖಂಡಿಗೆ, ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ, ಮತ್ತು ಮಹಾ ಪ್ರಬಂಧಕಿ ರೇಷ್ಮಾ ಮಲ್ಯ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.