Home_Page_Advt
Home_Page_Advt
Home_Page_Advt

ಕರಾಯದಲ್ಲಿ ಬೈಕ್‌ಗಳ ಮಧ್ಯೆ ಡಿಕ್ಕಿ – ಸವಾರರಿಗೆ ಗಾಯ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಉಪ್ಪಿನಂಗಡಿ ಸಮೀಪದ ಕರಾಯ ಗರೋಡಿ ಬಳಿ ಜೂ.6ರಂದು ರಾತ್ರಿ ಬೈಕ್‌ಗಳ ಮಧ್ಯೆ ಡಿಕ್ಕಿ ಸಂಭವಿಸಿ ಸವಾರರು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಶಾಸಕ ಸಂಜೀವ ಮಠಂದೂರು ಅವರ ಸಂಬಂಧಿಕ ಹಿರೇಬಂಡಾಡಿ ನಿವಾಸಿ ಬೈಕ್ ಸವಾರ ಪ್ರಜ್ವಲ್ ಮತ್ತು ಇನ್ನೊಂದು ಬೈಕ್‌ನಲ್ಲಿದ್ದ ಸವಾರ ನೆರಿಯ ನಿವಾಸಿ ಲಾರೆನ್ಸ್ ಎಂಬವರು ಗಾಯಗೊಂಡವರು. ಪ್ರಜ್ವಲ್ ಅವರು ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಉದ್ಯೋಗ ಮಾಡಿಕೊಂಡಿದ್ದು ರಾತ್ರಿ ಕೆಲಸ ಬಿಟ್ಟು ಮನೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಪ್ರಜ್ವಲ್ ಚಲಾಯಿಸುತ್ತಿದ್ದ ಬೈಕ್ ಮತ್ತು ವಿರುದ್ಧ ಧಿಕ್ಕಿನಿಂದ ಲಾರೆನ್ಸ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ಗಳ ಮಧ್ಯೆ ಕರಾಯ ಸಮೀಪದ ಗರೋಡಿಯಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ಗಾಯಗೊಂಡಿದ್ದು, ತೀವ್ರ ಗಾಯಗೊಂಡ ಲಾರೆನ್ಸ್ ಅವರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಜ್ವಲ್ ಅವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.