ವಿಟ್ಲ: ಇಲ್ಲಿನ ಮಾದರಿ ಹಿ.ಪ್ರಾ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶಾಲಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಸುಬ್ರಾಯ ಪೈರವರು ಮೆರವಣಿಗೆಗೆ ಚಾಲನೆ ನೀಡಿದರು. ವಿಟ್ಲದ ಪ್ರಮುಖ ಬೀದಿಗಳಲ್ಲಿ ವಿವಿಧ ಬೊಂಬೆವೇಷಗಳು, ಹುಲಿವೇಷ, ಜಾಗೃತಿ ಮೂಡಿಸುವ ಘೋಷವಾಖ್ಯಗಳು, ಬ್ಯಾಂಡ್ಸೆಟ್ ಮೂಲಕ ವಿದ್ಯಾರ್ಥಿಗಳನ್ನು ಮರೆವಣಿಗೆ ಮೂಲಕ ಕರೆತರಲಾಯಿತು. ಹೊಸತಾಗಿ ಸೇರ್ಪಡೆಗೊಂಡ ಮಕ್ಕಳನ್ನು ಆರತಿ ಬೆಳಗಿಸಿ, ಪುಷ್ಪವೃಷ್ಠಿಗೈದು ಸ್ವಾಗತಿಸಲಾಯಿತು. ಎಲ್.ಕೆ.ಜಿಗೆ ಸೇರ್ಪಡೆಗೊಂಡ ಪುಟ್ಟ ಮಕ್ಕಳನ್ನು ಮಡಿಲಲ್ಲಿ ಕುಳ್ಳಿರಿಸಿ ಸಾಂಕೇತಿಕವಾಗಿ ಓದಿಸಲಾಯಿತು. ವಿಟ್ಲ ಪ.ಪಂ ಅಧ್ಯಕ್ಷೆ ದಮಯಂತಿ, ಉಪಾಧ್ಯಕ್ಷರಾದ ಜಯಂತ್ ವಿಟ್ಲ, ಸಿ.ಆರ್.ಪಿ ರವಿಪ್ರಸಾದ್, ಶಾಲಾ ಮುಖ್ಯೋಪಾಧ್ಯಾಯಿನಿಯಾದ ಪುಷ್ಪಾ ಹೆಚ್, ಕೃಷ್ಣಯ್ಯ ಕೆ ವಿಟ್ಲ, ಆರ್ ಕೆ ಆರ್ಟ್ಸ್ನ ರಾಜೇಶ್ ವಿಟ್ಲ ಉಪಸ್ಥಿತರಿದ್ದರು.