HomePage_Banner
HomePage_Banner

ಮೂಲ ಸೌಕರ್ಯನಿಧಿಯಿಂದ ರೈಲ್ವೇ ಅಂಡರ್‌ಪಾಸ್ ನಿರ್ಮಾಣದ ಅನುದಾನಕ್ಕೆ ಬೇಡಿಕೆ – ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ರಾಜ್ಯ ಸರಕಾರಕ್ಕೆ ಮನವಿಗೆ ನಿರ್ಣಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಪಿಎಂಸಿ ರಸ್ತೆಯ ರೈಲ್ವೇ ಅಂಡರ್ ಪಾಸ್ ಕಾಮಗಾರಿಗೆ ರಾಜ್ಯ ಮೂಲ ಸೌಕರ್ಯ ನಿಧಿಯಿಂದ ಅನುದಾನ ನೀಡುವಂತೆ ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಲಾಗುವುದು ಎಂದು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ.

ಸಭೆಯು ಜೂ.7ರಂದು ಅಧ್ಯಕ್ಷ ದಿನೇಶ್ ಮೆದುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷ ದಿನೇಶ್ ಮೆದು ವಿಷಯ ಪ್ರಸ್ತಾಪಿಸಿ, ರೈಲ್ವೇ ಇಲಾಖಾಧಿಕಾರಿಗಳು ಕೆಲ ದಿನಗಳ ಹಿಂದೆ ಭೇಟಿ ನೀಟಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಅಂಡರ್ ಪಾಸ್ ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದೆ. ತಿಂಗಳ ಅಂತ್ಯಕ್ಕೆ ಯೋಜನೆ ಸಿದ್ದವಾಗಲಿದ್ದು ರೂ.10ಕೋಟಿಯ ಅಂದಾಜು ನಿರೀಕ್ಷಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಪಿಎಂಸಿಯಿಂದ ನೀಡಬೇಕಾದ ಅನುದಾನ ನೀಡಲು ಎಪಿಎಂಸಿ ಬದ್ಧವಾಗಿದೆ. ಉಳಿದಂತೆ ಸಂಸದರು, ಶಾಸಕರು ಹಾಗೂ ನಗರ ಸಭೆ ನಿಧಿಯಿಂದ ಅನುದಾನ ಒದಗಿಸಲು ಅಂದಾಜು ಪಟ್ಟಿ ದೊರೆತ ಬಳಿಕ ಸಭೆಯ ನಡೆಸಲಾಗುವುದು. ಅಲ್ಲದೆ ರಾಜ್ಯ ಸರಕಾರದ ಮೂಲ ಸೌಕರ್ಯ ನಿಧಿಯಲ್ಲಿ ಸಾಕಷ್ಟು ಅನುದಾನವಿದೆ. ಕಾಮಗಾರಿಗೆ ರೂ.10ಕೋಟಿ ಅಂದಾಜಿಸಲಾಗಿದ್ದು ಈ ಪೈಕಿ ರೂ.5ಕೋಟಿ ಅನುದಾನ ಮೂಲಸೌಕರ್ಯ ನಿಧಿಯಿಂದ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು. ಅಲ್ಲದೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಮೂಲಕ ಒತ್ತಡ ತರಲಾಗುವುದು ಎಂದು ಅಧ್ಯಕ್ಷ ದಿನೇಶ್ ಮೆದು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಸಭೆಯಲ್ಲಿ ಸಹಮತ ಸೂಚಿಸಿದ್ದು ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ.

ಬದಲಿ ರಸ್ತೆ:
ರೈಲ್ವೇ ಅಂಡರ್ ಪಾಸ್ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸುತ್ತ ಮುತ್ತಲ ಮನೆಯವರಿಗೆ ಸ್ವಲ್ಪ ತೊಂದರೆ ಉಂಟಾಗಬಹುದು. ಇದರ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ. ಬದಲಿ ರಸ್ತೆಯನ್ನು ನಿರ್ಮಿಸಿ ಸಂಚರಿಸಲು ಅವಕಾಶ ಮಾಡಿಕೊಡಲಾಗುತ್ತಿದ್ದು ಕಾಮಗಾರಿಯ ಸಂದರ್ಭದಲ್ಲಿ ಸಹಕರಿಸುವಂತೆ ಅಧ್ಯಕ್ಷ ದಿನೇಶ್ ಮೆದು ಮನವಿ ಮಾಡಿದರು.

ರೈತರ ಕೋವಿ ಠೇವಣಿಗೆ ಆಕ್ಷೇಪ:
ರೈತರು ಕೃಷಿ ರಕ್ಷಣೆಗಾಗಿ ತಮ್ಮ ಬಳಿ ಪರವಾನಿಗೆ ಪಡೆದು ಕೋವಿಯನ್ನು ಹೊಂದಿರುತ್ತಾರೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಕೋವಿದಾರರು ತಮ್ಮ ಕೋವಿಯನ್ನು ಠೇವಣಿ ಇಡಬೇಕಾಗಿದೆ. ಚುನಾವಣೆಯ ಘೋಷಣೆಯಾಗಿ ಮೂರು ತಿಂಗಳ ಕಾಲ ಕೋವಿಯನ್ನು ಠೇವಣಿಯಿಟ್ಟರೆ ರೈತರು ತಮ್ಮ ಕೃಷಿ ರಕ್ಷಣೆ ಮಾಡುವುದು ಹೇಗೆ ಸಾಧ್ಯ. ಈ ನಿಟ್ಟಿನಲ್ಲಿ ಕ್ರಿಮಿನಲ್ ಮೊಕ್ಕದ್ದಮೆ ಇರುವವರು ಮಾತ್ರ ಕೋವಿಯನ್ನು ಠೇವಣಿ ಇಡುವಂತೆ ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವುದಾಗಿ ಅಧ್ಯಕ್ಷ ದಿನೇಶ್ ಮೆದು ಹೇಳಿದರು. ಸದಸ್ಯ ತೀರ್ಥಾನಂದ ದುಗ್ಗಳ ಮಾತನಾಡಿ, ಪ್ರತಿ ವರ್ಷ ಚುನಾವಣೆಗಳು ಬರುತ್ತಿದ್ದು ಮೂರು ತಿಂಗಳ ಕಾಲ ಕೋವಿ ಠೇವಣಿಯಿಡಬೇಕಾಗುತ್ತದೆ. ಈ ಸಂದರ್ಭದಲ್ಲಿ ರೂ.೩೦೦ ಶುಲ್ಕ ಪಾವತಿಸಬೇಕು. ಅಲ್ಲದೆ ಪರವಾನಿಗೆ ನವೀಕರಣಕ್ಕೆ ರೂ.1500 ಶುಲ್ಕ ಪಾವತಿಸಬೇಕಾಗುತ್ತದೆ. ಹೀಗಾದರೆ ಕೋವಿಯಗಿಂತ ಅಧಿಕ ಹಣ ಇತರ ಉದ್ದೇಶಗಳೊಗೆ ಖರ್ಚಾಗುತ್ತದೆ ಎಂದರು. ಕೃಷಿ ರಕ್ಷಣೆಗಾಗಿ ಪಡೆದುಕೊಂಡಿರುವ ಕೋವಿಯನ್ನು ಚುನಾವಣಾ ಸಮಯದಲ್ಲಿ ಠೇವಣಿ ಇಡಬಾರದು ಹಾಗೂ ರೈತರ ಕೋವಿಯನ್ನು ಉಚಿತವಾಗಿ ನವೀಕರಣಗೊಳಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.

ರೂ.3.42ಕೋಟಿ ಉಳಿತಾಯ
2018-19ನೇ ಸಾಲಿನಲ್ಲಿ ಎಪಿಎಂಸಿಗೆ ವಿವಿಧ ಮೂಲಗಳಿಂದ ಒಟ್ಟು ರೂ.7,61,32,403 ಆದಾಯ ಬಂದಿದೆ. ಈ ಪೈಕಿ ರೂ.4,18,80,964ನ್ನು ಎಪಿಎಂಸಿಯ ಎಲ್ಲಾ ಉದ್ದೇಶಗಳಿಗೆ ವಿನಿಯೋಗಿಸಲಾಗಿದೆ. ಎಲ್ಲಾ ಖರ್ಚು ವೆಚ್ಚಗಳು ಕಳೆದು ವರದಿ ವರ್ಷದಲ್ಲಿ ರೂ.3,42,51,438 ಉಳಿತಾಯ ಬಂದಿದೆ ಎಂದು ಪ್ರಭಾರ ಕಾರ್ಯದರ್ಶಿ ರಾಮಚಂದ್ರ ತಿಳಿಸಿದರು.

ಉಪಾಧ್ಯಕ್ಷ ಮಂಜುನಾಥ ಎನ್.ಎಸ್, ಸದಸ್ಯರಾದ ಬೂಡಿಯಾರ್ ರಾಧಾಕೃಷ್ಣ ರೈ, ಅಬ್ದುಲ್ ಶಕೂರ್ ಹಾಜಿ, ಬಾಲಕೃಷ್ಣ ಬಾಣಜಾಲು, ಪುಲಸ್ತ್ಯ ರೈ, ಕುಶಾಲಪ್ಪ ಗೌಡ, ಕೊರಗಪ್ಪ, ಮೇದಪ್ಪ ಗೌಡ, ತ್ರಿವೇಣಿ ಪೆರ್‍ವೋಡಿ, ಕೃಷ್ಣ ಕುಮಾರ್ ರೈ, ನೋಡೆಲ್ ಅಧಿಕಾರಿ ಕುಬೇರ್ ನಾಯ್ಕ್, ಇಂಜಿನಿಯರ್ ಗುರುಪ್ರಸಾದ್ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಭಾರ ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.