ಹೊಸಂಗಡಿ: ಶಾಲೆಯ ಹಾಸ್ಟೇಲ್‌ನಲ್ಲಿ ಅವ್ಯವಸ್ಥೆ ಪ್ರಕರಣ: ಪ್ರಾಚಾರ್ಯ ಹುದ್ದೆಯ ಬದಲಾವಣೆಗೆ ಆದೇಶ

0

ವೇಣೂರು: ಹೊಸಂಗಡಿಯಲ್ಲಿರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಹಾಸ್ಟೇಲ್‌ನ ಅವ್ಯವಸ್ಥೆ ವಿದ್ಯಾಮಾನಗಳಿಗೆ ಸಂಬಂಧಿಸಿ ಪ್ರಾಚಾರ್ಯರ ಹುದ್ದೆಯ ಪ್ರಭಾರವನ್ನು ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರು ವಹಿಸಿಕೊಳ್ಳುವಂತೆ ಮಂಗಳೂರು ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದಾರೆ.

ಹಾಸ್ಟೇಲ್‌ನಲ್ಲಿ ಮಕ್ಕಳಿಗೆ ಹಲಸಿದ ಆಹಾರಗಳನ್ನು ನೀಡುತ್ತಿದ್ದಾರೆ ಮತ್ತು ಸ್ವಚ್ಚತೆ ಇಲ್ಲದ ಬಗ್ಗೆ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರಿಗೆ ಮೌಖಿಕ ದೂರು ಬಂದ ಹಿನ್ನೆಲೆಯಲ್ಲಿ ಅವರು ಅ. 20ರಂದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದು ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪ್ರಭಾರ ಪ್ರಾಚಾರ್ಯರಾಗಿದ್ದ ವಿದ್ಯಾಲತಾ ಅವರು ನಿಲಯದ ಪ್ರಾಚಾರ್ಯರ ಹುದ್ದೆಯ ಪ್ರಭಾರವನ್ನು ಆಸಕ್ತ ಶಿಕ್ಷಕರಿಗೆ ನೀಡುವಂತೆ ಆಗ್ರಹಿಸಿದ್ದರು.

ಇದೀಗ ಪ್ರಾಚಾರ್ಯರ ಪ್ರಭಾರವನ್ನು ಬದಲಿಸಿ ಮಂಗಳೂರು ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here