ಗಂಡಿಬಾಗಿಲು ಚರ್ಚಿನಲ್ಲಿ ಸಾಂಪ್ರದಾಯಿಕ ಸಕಲ ಮೃತರ ದಿನಾಚರಣೆ

0


ನೆರಿಯ : ನ.2 ಜಾಗತಿಕ ವಾಗಿ ಕ್ರೈಸ್ತರು ತಮ್ಮ ಮೃತ ಪೂರ್ವಜರನ್ನು ಕುಟುಂಬಸ್ತರನ್ನು ಸ್ಮರಿಸಿ ಅವರಿಗಾಗಿ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸುವ ದಿನ. ಸಾಂಪ್ರದಾಯಿಕ ಈ ದಿನವನ್ನು ಗಂಡಿಬಾಗಿಲು ಸಂತ ತೋಮಸರ ದೇವಾಲಯದ ಸೀಮೆಟ್ರಿ ಯ ದೇವಾಲಯ ವನ್ನು ವಿದ್ಯುತ್ ದೀಪ,ಮೇಣದ ಬತ್ತಿಗಳಿಂದ ಹಾಗೂ ವಿವಿಧ ಬಗೆ ಯ ಹೂಗಳಿಂದ ಅಲಂಕೃತಗೊಳಿಸಿ  ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಚಾನ್ಸಲರ್ ವಂದನಿಯ ಲಾರೆನ್ಸ್ ಪೂಣೋಲಿಲ್ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿ ಸತ್ಕಾರ್ಯ ಗಳ ಮುಖಾಂತರ ದೇವರು ಮೆಚ್ಚು ವ ಕೆಲಸವನ್ನು ಮಾಡಿ ಆತ್ಮವನ್ನು ಚಿರಾಯು ಗೊಳಿಸುವಂತೆ ಆಹ್ವಾನ ವಿತ್ತರು.

ಧರ್ಮ ಕೇಂದ್ರದ ವಂದನಿಯ ಫಾಧರ್ ಶಾಜಿ ಮಾತ್ಯು ಸಹಾಯಕರಾಗಿದ್ದರು. ಪಾಲನ ಸಮಿತಿಯ  ಸೇಬಾಸ್ಟಿನ್ ಎಂ ಜೆ ಶ್ರೀ ಬೇಬಿ, ಆಗಸ್ಟಿನ್, ಮಾತ್ಯು ಕಾರ್ಯಕ್ರಮ ವನ್ನು ವ್ಯವಸ್ಥೆ ಗೊಳಿಸಿದರು. ಮುಂಡಾಜೆ ಯ ಫಿಲಿಪ್ ವಿಲ್ಸನ್ ಈ ದಿನದ ಕಾರ್ಯಕ್ರಮ ಗಳಿಗೆ ಆರ್ಥಿಕ ಸಹಾಯ ಒದಗಿಸಿದರು.

LEAVE A REPLY

Please enter your comment!
Please enter your name here