Home_Page_Advt
Home_Page_Advt
Home_Page_Advt

ನಿಧಾನಗತಿಯಲ್ಲಿ ನಡೆಯುವ ಕಾಮಗಾರಿ : ಟೆಂಡರ್‌ದಾರರಿಗೆ ನೊಟೀಸ್ ಮಾಡಿ – ಶಾಸಕ ಮಠಂದೂರು

Puttur_Advt_NewsUnder_1
Puttur_Advt_NewsUnder_1
  • ನಗರಸಭೆ ಮಳೆ ಹಾನಿ ಮುಂಜಾಗರುಕತೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಶಾಸಕರು

ಪುತ್ತೂರು: ಕಳೆದ ಭಾರಿ ಪ್ರಾರಂಭದ ಮಳೆಯಲ್ಲಿ ನೆರೆ ಹಾವಳಿಯಾಗಿದೆ. ಕೆಲವರು ಮನೆ ಬಿಡುವ ಪರಿಸ್ಥಿತಿಯೂ ಬಂದಿದೆ. 2 ಜೀವ ಹೋಗಿದೆ. ಇದನ್ನು ಮನಗಂಡು ಈ ಮಳೆಗಾಲದಲ್ಲಿ ನಗರಸಭೆ 31 ವಾರ್ಡ್‌ಗಳಲ್ಲೂ ಮುಂಜಾಗರುಕತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜಕಾಲುವೆ, ಚರಂಡಿ ಹೂಳೆತ್ತುವ ಕಾಮಗಾರಿಗಳು ಮುಗಿಯಬೇಕಾಗಿತ್ತು. ಆದರೆ ಇನ್ನೂ ಮುಗಿಯದಿರುವುದಕ್ಕೆ ಕಾರಣ ಏನು. ಕಾಮಗಾರಿ ಕೈಗೆತ್ತಿಕೊಂಡ ಟೆಂಡರ್‌ದಾರರಿಗೆ ನೊಟೀಸ್ ಮಾಡಿ. ಟೆಂಡರ್ ರದ್ದುಪಡಿಸಿ ಎಂದು ಶಾಸಕ ಸಂಜೀವ ಮಠಂದೂರು ಅವರು ನಗರಸಭೆ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.

ನಗರಸಭೆ ವ್ಯಾಪ್ತಿಯಲ್ಲಿ ಮಳೆ ಹಾನಿ ಮುಂಜಾಗರುಕತೆ ಕುರಿತು ಜೂ. 7ರಂದು ನಗರಸಭೆ ಸಭಾಂಗಣದಲ್ಲಿ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರಸಭೆ ರಾಜಕಾಲುವೆಗೆ ಸಂಬಂಧಿಸಿ ರೂ.10ಲಕ್ಷದಲ್ಲಿ ಉರ್ಲಾಂಡಿ ಬೈಪಾಸ್‌ನಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬದಿಯಿಂದ ಏಳ್ಮುಡಿ ತನಕ ಹೂಳೆತ್ತುವ ಕಾಮಗಾರಿ ನಡೆಯಲಿದೆ. ಸಾಲ್ಮರ ಸೇತುವೆ ಬಳಿಯಿಂದ ಮುಂದೆ ಕಾಮಗಾರಿ ಬಾಕಿ ಇದೆ ಎಂದು ಜ್ಯೂನಿಯರ್ ಇಂಜಿನಿಯರ್ ಶ್ರೀಧರ್ ಶಾಸಕರ ಪ್ರಶ್ನೆಗೆ ಉತ್ತರಿಸಿದರು.

ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯೆ ವಿದ್ಯಾ ಗೌರಿ ಅವರು ಮಾತನಾಡಿ ದರ್ಬೆ ಅಂಕಲ್‌ಸ್ವೀಟ್ಸ್ ಬಳಿ ಡ್ರೈನೇಜ್ ಹೂಳೆತ್ತುವ ಕೆಲಸ ಆಗಿಲ್ಲ. ಅಲ್ಪಸ್ವಲ್ಪ ಹೂಳೆತ್ತಿದ್ದರೂ ತ್ಯಾಜ್ಯ ವಿಲೇವಾರಿ ಮಾಡಿಲ್ಲ ಎಂದರು. ಸದಸ್ಯ ಬಾಲಚಂದ್ರ ಅವರು ಕೂಡಾ ಈ ಕುರಿತು ಇತರ ಕಡೆಯಲ್ಲೂ ಇದೇ ರೀತಿ ಆಗುತ್ತಿದೆ ಎಂದು ಧ್ವನಿಗೂಡಿಸಿದರು. ಗೌರಿ ಬನ್ನೂರು ಮತ್ತು ಪಾತಿಮತ್ ಝೋರ ಅವರು ನಮ್ಮ ವಾರ್ಡ್‌ನಲ್ಲಿ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ ಎಂದರು. ಹೀಗೆ ಅನೇಕ ವಾರ್ಡ್‌ಗಳಲ್ಲಿ ಇನ್ನೂ ಚರಂಡಿ ಶುಚಿಗೊಳಿಸುವ ಕೆಲಸ ಆಗಿಲ್ಲ ಎಂದು ಇಂಜಿನಿಯರ್ ವಿಭಾಗದಿಂದ ಮಾಹಿತಿ ದೊರೆತಾಗ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಇನ್ನೆನು ಮಳೆ ಬರುವ ಸಾಧ್ಯತೆ ಇದೆ. ಅದಕ್ಕೆ ಪೂರ್ವಯೋಜಿತವಾಗಿ ನಗರಸಭೆಯಲ್ಲಿ ಇನ್ನೂ ಶೇ.90 ಕೆಲಸ ಆಗಿಲ್ಲ. ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕೆಂದ ಅವರು ಕಾಮಗಾರಿ ನಿಧಾನಗತಿಯಲ್ಲಿ ಸಾಗಿದರೆ ಗುತ್ತಿಗೆದಾರರಿಗೆ ನೊಟೀಸು ಮಾಡಬೇಕು ಮತ್ತು ಟೆಂಡರ್ ರದ್ದುಪಡಿಸಬೇಕೆಂದು ಹೇಳಿದರು. ಉತ್ತರಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಪ್ರಭಾರ ಪೌರಾಯುಕ್ತರಾದ ಅರುಣ್ ಅವರು ಗುತ್ತಿಗೆದಾರರನ್ನು ಇವತ್ತೆ ಕರೆಸಿ ಸೂಕ್ತ ಎಚ್ಚರಿಕೆ ನೀಡುವುದಾಗಿ ಭರವಸೆ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಗರಸಭೆಗೆ ಕೇಂದ್ರದಿಂದ ವಿವಿಧ ಅನುದಾನ ಲಭ್ಯವಿದೆ ಎಂದು ಹೇಳಿದರು.

ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಗೌರಿ ಬನ್ನೂರು, ವಿದ್ಯಾ ಗೌರಿ, ಸುಂದರ ಪೂಜಾರಿ ಬಡಾವು, ಭಾಮಿ ಅಶೋಕ್ ಶೆಣೈ, ಸಂತೋಷ್ ಬೊಳುವಾರು, ಪ್ರೇಮಲತಾ ನಂದಿಲ, ವಸಂತ ಕಾರೆಕ್ಕಾಡು, ನವೀನ್ ಪೆರಿಯತ್ತೋಡಿ, ರಾಬಿನ್, ಇಂದಿರಾ ಪುರುಷೋತ್ತಮ, ರೋಹಿಣಿ, ಪೂರ್ಣಿಮ ಚೆನ್ನಪ್ಪ, ಇಸುಬು ಕೆ, ಮಮತಾ ರಂಜನ್, ಮೋಹಿನಿ ವಿಶ್ವನಾಥ್, ಲೀಲಾವತಿ ಅಣ್ಣು ನಾಯ್ಕ್, ಶಿವರಾಮ ಸಪಲ್ಯ ಮತ್ತು ನಗರಸಭೆ ಜ್ಯೂನಿಯರ್ ಇಂಜಿನಿಯರ್‌ಗಳು, ಕಂದಾಯ ಅಧಿಕಾರಿಗಳು, ವಿವಿಧ ವಿಭಾಗಗಳ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.