HomePage_Banner
HomePage_Banner
HomePage_Banner

ಜಿಯೋ ಫೋನ್ ಆವಾಂತರ – ರಸ್ತೆಗೆ ಕಂಟಕ – ಚರಂಡಿ ಬಂದ್!!

Puttur_Advt_NewsUnder_1
Puttur_Advt_NewsUnder_1

ಕಡಬ : ಐತ್ತೂರು -ಕೊಣಾಜೆ ಸಾರ್ವಜನಿಕ ರಸ್ತೆ ಚರಂಡಿಯಲ್ಲಿ ಜಿಯೋ ಫೋನ್ ಕೇಬಲನ್ನು ಹೊಂಡ ತೋಡಿ ಅಳವಡಿಸುತ್ತಿದ್ದು ಸಾರ್ವಜನಿಕ ರಸ್ತೆಯಲ್ಲಿ ಕೆಸರು, ಮಣ್ಣುರಾಶಿ ಹಾಕಿ ಚರಂಡಿ ಮುಚ್ಚಿ ಹೋಗಿ ಈಚೆ ರಸ್ತೆಯು ಇಲ್ಲದೆ ನೀರು ಹರಿಯಲು ಚರಂಡಿಯು ಇಲ್ಲದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಐತ್ತೂರು ಕೊಣಾಜೆ ರಸ್ತೆ ಅದೆಷ್ಟೋ ವರ್ಷಗಳಿಂದ ಹಾಳಾಗಿದ್ದು ಸಾರ್ವಜನಿಕರ ಸ್ಥಳೀಯಾಡಳಿತಗಳ ಬೇಡಿಕೆಯಂತೆ ಈಗಾಗಲೇ ಶಾಸಕರ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ರಸ್ತೆ ಡಾಮರೀಕರಣಗೊಳಿಸಿ ಸಾರ್ವಜನಿಕರು ನಿರಾಯಾಸವಾಗಿ ತಮ್ಮ ವಾಹನದಲ್ಲಿ ಸಂಚರಿಸುತ್ತಿರುವಂತೆ ಮತ್ತೇ ಜಿಯೋ ಪೋನ್ ಅಳವಡಿಸುವ ನೆಪದಲ್ಲಿ ರಸ್ತೆಗೆ ತಾಗಿಕೊಂಡೆ ನೀರು ಹರಿಯುವ ಚರಂಡಿಯಲ್ಲಿಯೇ ಕೇಬಲ್ ಅಳವಡಿಸಿ ಚರಂಡಿಯನ್ನು ಮುಚ್ಚಿದ್ದು ಚರಂಡಿ ಮಣ್ಣನ್ನು ರಸ್ತೆಗೆ ಹಾಕಿ ಸಂಚಾರಕ್ಕೆ ತಡೆಯುಂಟು ಮಾಡಿದಲ್ಲದೆ ಮಳೆಗಾಲ ಪ್ರಾರಂಭವಾಗಿದ್ದು ಚರಂಡಿ ಮುಚ್ಚಿದ್ದರಿಂದ ಮಳೆ ನೀರು ರಸ್ತೆಯಲ್ಲಿಯೇ ಹರಿದು ಕೆಸರು ಗದ್ದೆಯಾಗಲಿದ್ದು ಮತ್ತೆ ಜನರನ್ನು ಸಂಕಷ್ಟಕ್ಕೆಯಿಡುಮಾಡುವ ಇವರ ಕೆಲಸಕ್ಕೆ ಗ್ರಾಮಸ್ಥರು ಆಕ್ರೋಶಗೊಂಡಿರುತ್ತಾರೆ.

ಊರಲ್ಲಿ ಅಬಿವೃದ್ಧಿಯ ಹಿತದೃಷ್ಟಿಯಿಂದ ಖಾಸಗಿ ವಲಯದ ಜಿಯೋ ಮೊಬೈಲ್ ಕೇಬಲ್ ಅಳವಡಿಸಲಾಗುತ್ತಿರುವುದು ಅಗತ್ಯವಾಗಿದ್ದರೂ ರಸ್ತೆ ಹಾಗೂ ರಸ್ತೆ ಚರಂಡಿಯನ್ನು ಬಿಟ್ಟು ಕೇಬಲ್ ಹೊಂಡ ತೆಗೆದು ಜಿಯೋ ಫೋನಿಗೆ ವ್ಯವಸ್ಥೆ ಮಾಡಬೇಕಿದ್ದರೂ ಗುತ್ತಿಗೆದಾರರು ಸುಲಭ ಉಪಾಯದಿಂದ ತಮ್ಮ ಕೆಲಸ ಮಾಡಿಕೊಳ್ಳಲು ರಸ್ತೆ ಚರಂಡಿಯಲ್ಲಿಯೇ ಕೇಬಲ್ ಅಳವಡಿಸುತ್ತಿರುವುದು ದುರದೃಷ್ಟಕರ ರಸ್ತೆ ಹಾಗೂ ಚರಂಡಿಯಲ್ಲಿ ಕೇಬಲ್ ಅಳವಡಿಸಲು ಗುಂಡಿ ತೋಡುತ್ತಿದ್ದರು ಸ್ಥಳೀಯ ಗ್ರಾಮ ಪಂಚಾಯತ್ ಕೈಕಟ್ಟಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಇನ್ನಷ್ಟು ಕಾರಣವಾಗಿದೆ. ಇನ್ನೊಂದೆಡೆ ಕೂಲಿ ಆಳುಗಳಿಂದ ಈ ಕೆಲಸ ಮಾಡಬೇಕಿದ್ದರೂ ಗುತ್ತಿಗೆದಾರರು ಜೆಸಿಬಿ ಇಟಾಚಿಗಳಿಂದ ಅಗೆದು ದೊಡ್ಡ ದೊಡ್ಡ ಹೊಂಡವನ್ನೇ ತೋಡುತ್ತಿದ್ದಾರೆ. ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟವರು ರಸ್ತೆ ಚರಂಡಿಯನ್ನು ಬಿಟ್ಟು ಕೇಬಲ್ ಹೊಂಡ ತೆಗೆಯಬೇಕು ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದೂರಿದ ಸಾರ್ವಜನಿಕರು ಇದೇ ರೀತಿ ರಸ್ತೆ ಚರಂಡಿ ಹಾಳುಕೆಡವಿದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾದಿತು ಎಂದು ಎಚ್ಚರಿಸಿದ್ದಾರೆ.

ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದ್ದು ರಸ್ತೆ ಚರಂಡಿಯಲ್ಲಿ ಕೇಬಲ್ ಅಳವಡಿಸುವುದು ಕಂಡು ಬಂದಿದೆ ಈ ಬಗ್ಗೆ ಜಿಯೋ ಕಂಪೆನಿಯ ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಅನುಮತಿ ಪಡೆದು ಕೇಬಲ್ ಅಳವಡಿಸಲಾಗುತ್ತಿದೆ ಆದರೆ ರಸ್ತೆ ಚರಂಡಿಯಲ್ಲಿ ಜೆಸಿಬಿ ಮೂಲಕ ಕೇಬಲ್ ಹೊಂಡ ತೆಗೆಯಲು ಅನುಮತಿ ಇಲ್ಲದ ಬಗ್ಗೆ ಸೂಚಿಸಿದ್ದು ಯಾವುದೇ ಕಾರಣಕ್ಕೂ ರಸ್ತೆ ಹಾಗೂ ಚರಂಡಿಗೆ ತೊಂದರೆ ಮಾಡಬಾರದು ರಸ್ತೆ ಹಾಳಾಗದಂತೆ ಮತ್ತು ಚರಂಡಿ ಯಥಾ ಸ್ಥಿತಿಗೆ ತರಲು ಜಿಯೋ ಕೇಬಲ್ ಅಳವಡಿಕಾರರು ಒಪ್ಪಿಕೊಂಡಿದ್ದು ಈ ಬಗ್ಗೆ ಠೇವಣಿ ಕೂಡ ಇಟ್ಟಿದ್ದಾರೆ ಒಂದು ವೇಳೆ ಅಸಮರ್ಪಕವಾಗಿ ರಸ್ತೆ ಚರಂಡಿ ಮಾಡುವುದು ಕಂಡು ಬಂದಲ್ಲಿ ಠೇವಣಿಯನ್ನು ತಡೆಹಿಡಿಯಲಾಗುವುದು – ಭರತ್ ಸಹಾಯಕ ಇಂಜಿನಿಯರ್ ಜಿಲ್ಲಾ ಪಂಚಾಯತ್ ಪುತ್ತೂರು ವಿಭಾಗ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.