Home_Page_Advt
Home_Page_Advt
Home_Page_Advt

2 ತಿಂಗಳು ಕಳೆದರೂ ವೇತನ ಬಂದಿಲ್ಲ – ನಗರಸಭೆ ಪೌರ ಕಾರ್ಮಿಕರಿಂದ ಸಂಸದರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ಖಾಯಂ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ನಮಗೆ ಕಳೆದ 2ತಿಂಗಳಿನಿಂದ ವೇತನ ಬಂದಿಲ್ಲ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಸಹಾಯಕ ಕಮೀಷನರ್‌ಗೂ ಮನವಿ ಸಲ್ಲಿಸಿದ್ದೇವೆ ಆದರೂ ವೇತನ ಬಂದಿಲ್ಲ ಎಂದು ನಗರಸಭೆ ಪೌರಕಾರ್ಮಿಕರು ಸಂಸದ ನಳಿನ್ ಅವರಲ್ಲಿ ತಮ್ಮ ಅಳಲನ್ನು ವ್ಯಕ್ತಪಡಿಸಿದ ಘಟನೆ ಜೂ.7ರಂದು ನಡೆದಿದೆ.

ನಗರಸಭೆಯಲ್ಲಿ 9 ಮಂದಿ ಪೌರಕಾರ್ಮಿಕರು ಖಾಯಂ ಆಗಿ ಕೆಲಸ ನಿರ್ವಹಿಸುತ್ತಿದ್ದು, ತಮ್ಮ ಜೀವನ ಸಾಗಿಸಲು ವೇತನ ಸಿಗದೆ ಕಷ್ಟ ಸಾಧ್ಯವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಮನವಿ ಮಾಡಿದರು. ಸಂಸದರು ನಗರಸಭೆ ಪ್ರಭಾರ ಪೌರಾಯುಕ್ತ ಅರುಣ್ ಅವರನ್ನು ಕರೆಸಿ ವಿಚಾರಿಸಿದರು. ಉತ್ತರಿಸಿದ ಅರುಣ್ ಅವರು ಇದು ಇಡಿ ರಾಜ್ಯಾದ್ಯಾಂತ ನಗರಸಭೆಯಲ್ಲಿ ಸಮಸ್ಯೆ ಇದೆ. ಕೇವಲ ಪೌರ ಕಾರ್ಮಿಕರಿಗೆ ಮಾತ್ರವಲ್ಲ ಎಲ್ಲಾ ಸಿಬಂದಿಗಳಿಗೆ ವೇತನ ಸಿಕ್ಕಿಲ್ಲ. ತಾಂತ್ರಿಕ ದೋಷದಿಂದ ಸಮಸ್ಯೆ ಆಗಿದೆ. ಇವತ್ತು ನಾಳೆಯಲ್ಲಿ ಸರಿಯಾಗಲಿದೆ ಎಂದರು. ಸಂಸದ ನಳಿನ್ ಕುಮಾರ್ ಅವರು ಪೌರ ಕಾರ್ಮಿಕರಲ್ಲಿ ಮಾತನಾಡಿ ಸೋಮವಾರದೊಳಗೆ ನಿಮಗೆ ವೇತನ ಲಭ್ಯವಾಗದಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಹೇಳಿ ಸಮಾಧಾನ ಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.