ಬೆಳ್ತಂಗಡಿ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮುಳಿಯ ಜ್ಯುವೆಲ್ಸ್ ನಲ್ಲಿ ಕಾವ್ಯ-ಗಾನ-ಕುಂಚ-ನೃತ್ಯ ಸಾಂಸ್ಕೃತಿಕ ವೈಭವ

0

 

ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ಪ್ರಸ್ತುತ ಪಡಿಸುವ, ಮುಳಿಯ ಬೆಳೆಸೋಣ ನಮ್ಮತನ ,ಕನ್ನಡ ಬದುಕು-ಬಂಗಾರ ,ಕಾವ್ಯ-ಗಾನ-ಕುಂಚ-ನೃತ್ಯ ಸಾಂಸ್ಕೃತಿಕ ವೈಭವ  ನ.1 ರಂದು ಮುಳಿಯ ಜ್ಯುವೆಲ್ಸ್ ನಲ್ಲಿ ಜರುಗಿತು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ  ಅಖಿಲ ಭಾರತ ಸಾಹಿತ್ಯ ಪರಿಷತ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಗಣಪತಿ ಭಟ್ ಕುಳವರ್ಮ, ವಾಣಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಮುಖ್ಯಸ್ಥರು ಅನುರಾಧ ಕೆ ರಾವ್ ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳಿಯ ಜ್ಯುವೆಲ್ಸ್ ಆಡಳಿತ ನಿರ್ದೇಶಕರು ಕೃಷ್ಣ ನಾರಾಯಣ ಮುಳಿಯ ವಹಿಸಿದ್ದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಸರಾಂತ ಚಿತ್ರಕಲಾವಿದ ವಿ.ಕೆ ವಿಟ್ಲರವರಿಂದ ಕುಂಚ ಪ್ರದರ್ಶನ, ಅಂತರಾಷ್ಟ್ರೀಯ  ಆರ್ಯಭಟ ಪ್ರಶಸ್ತಿ ಪುರಸ್ಕೃತ ಉದಯ್ ಕುಮಾರ್ ಲಾಯಿಲ ಸಾರಥ್ಯದಲ್ಲಿ  ಕಲಾಗುಡಿ ಸಂಗೀತ ಕಾರ್ಯಕ್ರಮ ಮತ್ತು ತಾಲೂಕಿನ ಪ್ರತಿಷ್ಟಿತ ನೃತ್ಯ ತಂಡದಿಂದ ನೃತ್ಯ ವೈಭವ ಕಾರ್ಯಕ್ರಮ ಜರುಗಿತು.

LEAVE A REPLY

Please enter your comment!
Please enter your name here