ಅನುಗ್ರಹದಲ್ಲಿ ಆಕರ್ಷಣೆಯ ವಿಜ್ಞಾನ ವಸ್ತು ಪ್ರದರ್ಶನ

0


ಲಾಯಿಲ: ಅನುಗ್ರಹ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವು ಶಾಲಾ ಸಭಾಭವನದಲ್ಲಿ ನಡೆಯಿತು.

ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರಾದ ವಂ! ಫಾ! ವಿಜಯ್ ಲೋಬೋ ರವರು ಪ್ರಾಸ್ತಾವಿಕ ಮಾತಿನೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷರಾದ ವಂ| ಫಾ| ಜೇಮ್ಸ್ ಡಿಸೋಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳ ಜೊತೆಗೂಡಿ ವೈಜ್ಞಾನಿಕವಾಗಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.

ಮುಖ್ಯ ಅತಿಥಿಗಳಾದ ಪಿಲೋಮಿನಾ ಕಾಲೇಜ್ ಪುತ್ತೂರಿನ ಉಪನ್ಯಾಸಕರಾದ ಗೋವಿಂದ ಪ್ರಕಾಶ್ ಹಾಗೂ ಬಂಗಾಡಿ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಾದ  ರೋಶನ್ ಡಿಸೋಜ ರವರು ದಿಕ್ಸೂಚಿ ಭಾಷಣ ನೀಡಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಶಾಲಾ ಸಂಚಾಲಕರಾದ ವಂ| ಫಾ| ಜೇಮ್ಸ್ ಡಿಸೋಜ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಪಾಲಕ ಪೋಷಕ ಸಂಘದ ಉಪಧ್ಯಕ್ಷರಾದ ಶ್ರೀ ಆನಂದಕೃಷ್ಣ, ಶಿಕ್ಷಣ ಇಲಾಖೆಯ ಶ್ರೀ ಮೋಹನ್ ಕುಮಾರ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಶ್ರೀ ಆಂಟನಿ ಫೆರ್ನಾಂಡೀಸ್, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಪ್ರವೀಣ್ ಫೆರ್ನಾಂಡೀಸ್, ಪ್ರಾಥಮಿಕ ವಿಭಾಗದ ರವಿಕುಮಾರ್ ರವರು ಉಪಸ್ಥಿತರಿದ್ದರು. ಶ್ರೀ ಪಿಲೋಮಿನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ರಕ್ಷಾ ವಂದಿಸಿದರು. ತದ ನಂತರ ವಿವಿಧ ಶಾಲಾ ಮಕ್ಕಳು ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.

LEAVE A REPLY

Please enter your comment!
Please enter your name here