HomePage_Banner
HomePage_Banner

ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿ: ಅಧ್ಯಕ್ಷ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ಮೋಹನ್‌ಕುಮಾರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
   ಡಾ. ಸದಾನಂದ ಕುಂದಾರ್   
                                                                      ಮೋಹನ್ ಕುಮಾರ್

ನೆಲ್ಯಾಡಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ನೆಲ್ಯಾಡಿ ಗ್ರಾಮ ಸಮಿತಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಡಾ.ಸದಾನಂದ ಕುಂದರ್ ಹಾಗೂ ಕಾರ್ಯದರ್ಶಿಯಾಗಿ ಮೋಹನ್ ಕುಮಾರ್ ದೋಂತಿಲ ಪುನರಾಯ್ಕೆಗೊಂಡಿದ್ದಾರೆ.

ಜೂ.2ರಂದು ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಗ್ರಾಮ ಸಮಿತಿ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಪುತ್ತೂರು ತಾಲೂಕು ಬಿಲ್ಲವ ಸಮಿತಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಯವರು ನೂತನ ಪದಾಧಿಕಾರಿಗಳನ್ನು ಘೋಷಿಸಿದರು. ಉಪಾಧ್ಯಕ್ಷರಾಗಿ ವೀರಪ್ಪ ಅಂಬರ್ಜೆ, ಕೋಶಾಧಿಕಾರಿಯಾಗಿ ಲೋಕೋಶ್ ಬಾಣಜಾಲು, ಜೊತೆ ಕಾರ್ಯದರ್ಶಿಯಾಗಿ ಮಹೇಶ್ ಬರೆಗುಡ್ಡೆಯವರನ್ನು ಪುನರಾಯ್ಕೆಗೊಳಿಸಲಾಯಿತು. ಪುತ್ತೂರು ತಾಲೂಕು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ಸದಾನಂದ ಕುಮಾರ್, ನೆಲ್ಯಾಡಿ ವಲಯ ಸಂಚಾಲಕ ಚಂದ್ರಶೇಖರ ಬಾಣಜಾಲು, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್, ಯುವ ವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಅಜಿತ್‌ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.