ಕಣಿಯೂರು: ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಗ್ರಾಮ ಸುಭೀಕ್ಷೆಗಾಗಿ ಸಿಯಾಳಾಭಿಷೇಕ ಕಾರ್ಯಕ್ರಮ

0

ಕಣಿಯೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಗುರುವಾಯನಕೆರೆ , ತಾಲೂಕು ಜನಜಾಗೃತಿ ವೇದಿಕೆ ಬೆಳ್ತಂಗಡಿ, ಜನಜಾಗೃತಿ ಗ್ರಾಮ ಸಮಿತಿ ಕಣಿಯೂರು, ಶ್ರೀ ಮಹಾವಿಷ್ಣು ದೇವಸ್ಥಾನ ಕಣಿಯೂರು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕಣಿಯೂರು/ ಪದ್ಮುಂಜ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾll.ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾll ಹೇಮಾವತಿ.ವಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನ.3ರಂದು  ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಗ್ರಾಮ ಸುಭೀಕ್ಷೆಗಾಗಿ ಸಿಯಾಳಾಭಿಷೇಕ ಕಾರ್ಯಕ್ರಮ  ಜರುಗಿತು.

ಕಾರ್ಯಕ್ರಮದಲ್ಲಿ  ಶಾರದ ರೈ ಅಧ್ಯಕ್ಷರು ತಾಲೂಕು ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ಪ್ರಪುಲ್ಲ ಚಂದ್ರ ಅಡ್ಯಂತಾಯ ಅಧ್ಯಕ್ಷರು ಜನಜಾಗೃತಿ ಗ್ರಾಮ ಸಮಿತಿ ಕಣಿಯೂರು,  ಗಾಯತ್ರಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕಣಿಯೂರು,  ಶಿವಶಂಕರ್ ಮಾಲೀಕರು ಮಾರುತಿಪುರ ರೈತಬಂಧು ಆಹಾರೋದ್ಯಮ ಪ್ರೈ.ಲಿಮಿಟೆಡ್ ಕಣಿಯೂರು,  ಸುದರ್ಶನ್ ಹೆಗ್ಗಡೆ ಆಡಳಿತ ಮೊಕ್ತೇಸರರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಣಿಯೂರು,  ರಾಜೀವ್ ರೈ ಸದಸ್ಯರು ತಾಲೂಕು ಜನಜಾಗೃತಿ ವೇದಿಕೆ ಬೆಳ್ತಂಗಡಿ,  ರಮಾನಂದ ಪೂಜಾರಿ ಒಕ್ಕೂಟ ವಲಯ್ಯಾಧ್ಯಕ್ಷರು ಕಣಿಯೂರು ವಲಯ,  ಜಗದೀಶ್ ಉಪಸಮಿತಿ ಸದಸ್ಯರು ಕಣಿಯೂರು ಒಕ್ಕೂಟ,  ನಂದಕುಮಾರ್ ಪಿ.ಪಿ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ಕಛೇರಿ ಬೆಳ್ತಂಗಡಿ,  ಪ್ರೇಮ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಣಿಯೂರು ವಲಯ,  ಪ್ರೇಮ ಸೇವಾಪ್ರತಿನಿಧಿ ಕಣಿಯೂರು,  ತಾರಾ ಸೇವಾಪ್ರತಿನಿಧಿ ಪದ್ಮುಂಜ,  ರಮೇಶ್ ಸ್ವಯಂಸೇವಕರು ನವಜೀವನ ಸಮಿತಿ ಕಣಿಯೂರು ವಲಯ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರುಗಳು, ಗ್ರಾಮ ಸಮಿತಿ ಪದಾಧಿಕಾರಿಗಳು, ಗ್ರಾಮದ ಗಣ್ಯರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

ಸ್ವಾಮಿಗೆ ಗ್ರಾಮ ಸುಭೀಕ್ಷೆಗಾಗಿ ಸಾಮೂಹಿಕ ಸಂಕಲ್ಪ ಪೂಜೆ, ಸೀಯಾಳಾಭಿಷೇಕ ಪೂಜೆ, ಮತ್ತು ಮಹಾಪೂಜೆ ನೆರವೇರಿತು.

ಊರಿನ ಸಮಸ್ತರ ತನು-ಮನ-ಧನದ ಸಹಕಾರದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಭಗವತ್ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here