HomePage_Banner
HomePage_Banner
HomePage_Banner

ಡಾ. ಬಿ.ಕೆ ರೈಯವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ವೈದ್ಯರಾಗಿ ಆರೋಗ್ಯವಂತ ಸಮಾಜಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದ ಬಜದಗುತ್ತು ಡಾ. ಬಿ.ಕೆ. ರೈಯವರು ಇವತ್ತು ನಮ್ಮೊಂದಿಗಿಲ್ಲದಿದ್ದರೂ, ಅವರು ಸಮಾಜಕ್ಕೆ ನೀಡಿದ ಸೇವೆಯಿಂದಾಗಿ ಅವರ ಹೆಸರು ಈ ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಾಗಿದೆ ಎಂದು ಜಯರಾಮ ತಿಳಿಸಿದರು.
ಇಲ್ಲಿನ ನೇತ್ರಾವತಿ ಸಮುದಾಯ ಭವನದಲ್ಲಿ ಜೂ.8ರಂದು ನಡೆದ ದಿ. ಡಾ. ಬಿ. ಕೆ. ರೈ (ಬಜದಗುತ್ತು ಕುಂಞಣ್ಣ) ಅವರ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.

ಡಾ. ಬಿ.ಕೆ. ಕುಂಞಣ್ಣ ರೈಯವರು ಆ ಕಾಲದಲ್ಲಿ ವೈದ್ಯಕೀಯ ಪದವಿ ಪಡೆದು 1964ರಲ್ಲಿ ಗುತ್ತಿಗಾರಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಸೇವೆ ನೀಡಿದರು. ಎಂಟು ವರ್ಷಗಳ ಕಾಲ ಇಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು ತನ್ನ ನಿಷ್ಕಲ್ಮಶ ಸೇವೆಯಿಂದಾಗಿ ಇಲ್ಲಿನ ಪ್ರತಿಯೋರ್ವರ ಹೃದಯದಲ್ಲಿ ನೆಲೆ ನಿಂತರು. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಆ ಕಾಲದಲ್ಲಿ ಅವರು ಕಾಡು ಮೇಡುಗಳನ್ನು ದಾಟಿ ಗುತ್ತಿಗಾರಿನಿಂದ ಸುಮಾರು 40 ಕಿ.ಮೀ. ವ್ಯಾಪ್ತಿಯೊಳಗೆ ನಡೆದುಕೊಂಡು ಹೋಗಿ ಆರೋಗ್ಯ ಸೇವೆ ನೀಡಿದ್ದಾರೆ. ಈ ಮೂಲಕ ಅವರು ಎಲ್ಲರ ಆಪತ್ಬಾಂಧವರಾಗಿದ್ದರು. ಜಾತ್ಯಾತೀತ ನಿಲುವು ಹೊಂದಿದ್ದ ಡಾ. ಬಿ. ಕೆ. ರೈಯವರದ್ದು ಸರಳ ಸಜ್ಜನಿಕೆಯ ಜೀವನವಾಗಿದ್ದು, ಅಜಾನುಬಾಹು ವ್ಯಕ್ತಿತ್ವ ಅವರದ್ದಾಗಿತ್ತು. ಅವರು ವೈದ್ಯಕೀಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿದ್ದರು. ಉತ್ತಮ ಕ್ರೀಡಾಪಟುವಾಗಿದ್ದ ಬ್ಯಾಡ್ಮಿಂಟನ್, ವಾಲಿಬಾಲ್ ಪಟುವಾಗಿದ್ದು, ಹಲವರಿಗೆ ತನ್ನಲ್ಲಿದ್ದ ಕ್ರೀಡಾ ಕೌಶಲ್ಯವನ್ನು ಧಾರೆಯೆರೆದಿದ್ದಾರೆ. ಅವರು ಉತ್ತಮ ರಂಗನಟ ಕೂಡಾ ಆಗಿದ್ದು, ಸತ್ಯಹರೀಶ್ಚಂದ್ರ ನಾಟಕದಲ್ಲಿ ಅವರ ಸತ್ಯಹರೀಶ್ಚಂದ್ರನ ಪಾತ್ರ ಈಗಲೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.

ಹೀಗೆ ಸಮಾಜದ, ಬಡಬಗ್ಗರ ಸೇವೆಯನ್ನೇ ತನ್ನ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು 83 ವರ್ಷಗಳ ಸಾರ್ಥಕ್ಯ ಜೀವನ ನಡೆಸಿದ ಡಾ. ಬಿ. ಕೆ. ರೈಯವರ ಉಸಿರು ನಿಂತರು ಅವರ ಹೆಸರು ಈ ಸಮಾಜದಲ್ಲಿ ಎಂದೆಂದಿಗೂ ಉಳಿಯುವಂತಾಗಿದೆ. ಅವರ ಜೀವನಾದರ್ಶಗಳು ನಮಗೆಲ್ಲರಿಗೂ ದಾರಿ ದೀಪವಾಗಿದೆ ಎಂದರು. ಈ ಸಂದರ್ಭ ಅವರ ಜೀವನದ ಸಾಧನೆಯ ಪೋಟೋಗಳನ್ನು ಪರದೆಯ ಮೂಲಕ ಪ್ರದರ್ಶಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.