Home_Page_Advt
Home_Page_Advt
Home_Page_Advt

ಮಂಗಳೂರು ಆಕಾಶವಾಣಿ ‘ಕಾವ್ಯಯಾನ’ ಗಣರಾಜ್ ಕುಂಬ್ಳೆಯವರಿಂದ ಕಾವ್ಯ ವ್ಯಾಖ್ಯಾನ

Puttur_Advt_NewsUnder_1
Puttur_Advt_NewsUnder_1


ರಾಮಕುಂಜ: ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಪ್ರಸಾರವಾಗುವ ಕವಿ ರತ್ನಾಕರ ವರ್ಣಿಯ ಭರತೇಶ ವೈಭವ ಕಾವ್ಯ ವಾಚನ ಮತ್ತು ವ್ಯಾಖ್ಯಾನದ ಸರಣಿ ಕಾರ್ಯಕ್ರಮ ‘ಕಾವ್ಯಯಾನ’ದ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಕನ್ನಡ ಉಪನ್ಯಾಸಕ, ಸಾಹಿತಿ ಗಣರಾಜ್ ಕುಂಬ್ಳೆಯವರು ಕಾವ್ಯದ ವ್ಯಾಖ್ಯಾನ ಮಾಡಲಿದ್ದಾರೆ.

ಜೂನ್ ತಿಂಗಳ ಸರಣಿ ಕಾರ್ಯಕ್ರಮ 9,10, 15 ಮತ್ತು 16ರಂದು ಬೆಳಿಗ್ಗೆ 7.15ಕ್ಕೆ ಪ್ರಸಾರವಾಗಲಿದೆ. ಕಾವ್ಯಯಾನದಲ್ಲಿ ವಿಷ್ಣುಪ್ರಸಾದ್ ಕಲ್ಲೂರಾಯ ಗೇರುಕಟ್ಟೆ ಇವರು ಕಾವ್ಯವಾಚನ ಮಾಡಲಿದ್ದು ಗಣರಾಜ್ ಕುಂಬ್ಳೆಯವರು ಕಾವ್ಯದ ವ್ಯಾಖ್ಯಾನ ಮಾಡಲಿದ್ದಾರೆ ಎಂದು ಆಕಾಶವಾಣಿ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.