Home_Page_Advt
Home_Page_Advt
Home_Page_Advt

ಕುಂಬ್ರ: ಶ್ರೀ ಭಗವತಿ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

  • ಸರಿಯಾದ ದಾಖಲೆಯೊಂದಿಗೆ ವಾಹನ ಚಲಾಯಿಸಿರಿ- ಎಸ್.ಐ. ಸಕ್ತಿವೇಲು

ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಪೇಟೆಯ ನ್ಯೂ ಪ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಭಗವತಿ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಜೂ.8ರಂದು ಶುಭಾರಂಭಗೊಂಡಿತು. ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಸಕ್ತಿವೇಲುರವರು ದೀಪ ಬೆಳಗಿಸುವುದರ ಮೂಲಕ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದ್ವಿಚಕ್ರದಿಂದ ಹಿಡಿದು ಘನ ವಾಹನದ ತನಕ ವಾಹನಗಳ ಮಾಲಕ, ಚಾಲಕರು ವಾಹನಗಳ ಬಗ್ಗೆ ಸರಿಯಾದ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ವಾಹನಗಳ ಹೊಗೆ ತಪಾಸಣಾ ರಶೀದಿ ಅತೀ ಅಗತ್ಯ. ಒಂದು ವೇಳೆ ಹೊಗೆ ತಪಾಸಣೆಯ ರಶೀದಿ ಇಲ್ಲದೇ ಇದ್ದಲ್ಲಿ 100 ರಿಂದ ಸಾವಿರದ ತನಕ ದಂಡ ಕಟ್ಟಬೇಕಾಗುತ್ತದೆ. ಆದ್ದರಿಂದ ವಾಹನ ಚಾಲನೆ ಮಾಡುವ ಪ್ರತಿಯೊಬ್ಬರು ತಮ್ಮ ವಾಹನಗಳ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ವಾಹನ ಚಲಾಯಿಸುವುದು ಒಳ್ಳೆಯದು ಎಂದು ಹೇಳಿ, ಕುಂಬ್ರ ಪೇಟೆಯಲ್ಲಿ ಆರಂಭವಾದ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಅಭಿವೃದ್ಧಿಯನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ ರೆಂಜರವರು ಮಾತನಾಡಿ, ಗ್ರಾಮೀಣ ಪ್ರದೇಶಕ್ಕೆ ವಾಯು ಮಾಲಿನ್ಯ ತಪಾಸಣಾ ಕೇಂದ್ರದ ಅಗತ್ಯತೆ ತುಂಬಾ ಇತ್ತು. ಕುಂಬ್ರದಲ್ಲಿ ಆರಂಭವಾದ ಈ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಅದೆಷ್ಟೋ ವಾಹನ ಚಾಲಕರಿಗೆ ಪ್ರಯೋಜನವಾಗಲಿದೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು. ಒಳಮೊಗ್ರು ಗ್ರಾ.ಪಂ ಸದಸ್ಯ ಅಬ್ದುಲ್ ರಹೀಮಾನ್ ಅರಿಯಡ್ಕ, ಬೆಳೆಯುತ್ತಿರುವ ಕುಂಬ್ರ ಪೇಟೆಗೆ ವಾಯು ಮಾಲಿನ್ಯ ತಪಾಸಣಾ ಕೇಂದ್ರದ ಅವಶ್ಯಕತೆ ತುಂಬಾ ಇತ್ತು ಅದನ್ನು ನಾರಾಯಣ ಕುಕ್ಕುಪುಣಿಯವರು ನೀಗಿಸಿದ್ದಾರೆ. ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು. ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಮೆಲ್ವಿನ್ ಮೊಂತೆರೋ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಮೊದಲ ಗ್ರಾಹಕರಾದ ಮಂದಾರ ಸ್ಟುಡಿಯೋದ ಜಗದೀಶ್ ಎಂ.ಪಿರವರಿಗೆ ಸಕ್ತಿವೇಲುರವರು ಪ್ರಮಾಣ ಪತ್ರ ಪರಿಶೀಲನೆ ಮಾಡಿ ವಿತರಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಮೋಹನ್‌ದಾಸ್ ರೈ ಕುಂಬ್ರ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಗ್ರಾಪಂ ಮಾಜಿ ಸದಸ್ಯ ಕುಂಬ್ರ ಬಾಲಕೃಷ್ಣ ರೈ ಪಠೇಲ್, ಕುಂಬ್ರ ಪೆಟ್ರೋಲ್ ಬಂಕ್ ಮಾಲಕ ಲಕ್ಷ್ಮೀನಾರಾಯಣ ಮಯ್ಯ ಮತ್ತಿತರರು ಉಪಸ್ಥಿತರಿದ್ದರು. ಗ್ರಾಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ವಾಣಿಯನ್ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ತಿಮ್ಮಪ್ಪ ಪಾಟಾಳಿ, ಕುಂಬ್ರ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮತ್ತಿತರರು ಅಗಮಿಸಿ ಶುಭ ಹಾರೈಸಿದರು. ಇದಲ್ಲದೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಉದ್ಯಮಿಗಳು, ಗಣ್ಯರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಶ್ರೀ ಭಗವತಿ ವಾಯು ಮಾಲಿನ್ಯ ತಪಾಸಣಾ ಕೇಂದ್ರದ ಮಾಲಕಿ ಅಜಿತಾ ನಾರಾಯಣ್ ಅತಿಥಿಗಳನ್ನು ಸತ್ಕರಿಸಿ, ಸಹಕಾರ ಕೋರಿದರು. ನಾರಾಯಣ ಕುಕ್ಕುಪುಣಿ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು. ಅನೀಶ್ ಕೆ.ಎನ್ ಸಹಕರಿಸಿದರು.

ಶ್ರೀ ಭಗವತೀ ಸರ್ವೀಸಸ್‌ನ ಸೇವೆಗಳು:
ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿರುವ ಶ್ರೀ ಭಗವತೀ ಸರ್ವೀಸಸ್‌ನಲ್ಲಿ ಎಲ್‌ಐಸಿ ಪ್ರೀಮಿಯಂ ಪಾವತಿ ಕೇಂದ್ರ, ಪಾಲಿಸಿದಾರರ ಸೇವಾ ಕೇಂದ್ರ, ವಾಹನಗಳ ಇನ್ಸೂರೆನ್ಸ್, ಎಲ್ಲಾ ರೀತಿಯ ಆರೋಗ್ಯ ವಿಮೆ, ಆರ್‌ಟಿಸಿ ಸೌಲಭ್ಯ, ಜೆರಾಕ್ಸ್, ಪಾನ್‌ಕಾರ್ಡ್, ಪಾಸ್‌ಪೋರ್ಟ್, ಪತ್ರಿಕಾ ಜಾಹೀರಾತು ಮತ್ತು ವರದಿ ಇತ್ಯಾದಿ ಹಲವು ಸೇವೆಗಳು ಗ್ರಾಹಕರಿಗೆ ಲಭ್ಯವಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.