Home_Page_Advt
Home_Page_Advt
Home_Page_Advt

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವ

Puttur_Advt_NewsUnder_1
Puttur_Advt_NewsUnder_1

ಚಿತ್ರ-ಉಮಾಪ್ರಸಾದ್ ರೈ ನಡುಬೈಲು

ಪರಿಪೂರ್ಣ ಶಿಕ್ಷಣವೇ ನಮ್ಮ ಧ್ಯೇಯ- ಸೀತಾರಾಮ ರೈ
ಪುತ್ತೂರು: ವಿದ್ಯಾರ್ಥಿಯ ಸರ್ವಾಂಗೀಣ ಬದುಕನ್ನು ರೂಪಿಸುವ ಉತ್ತಮ ಶಿಕ್ಷಣವನ್ನು ನೀಡುವುದೇ ನಮ್ಮ ಸಂಸ್ಥೆಯ ಧ್ಯೇಯವಾಗಿದ್ದು, ಗ್ರಾಮೀಣ ಪ್ರದೇಶದ ಸುಂದರವಾದ ತಾಣದಲ್ಲಿ ವಿದ್ಯಾರಶ್ಮಿ ವಿದ್ಯಾಲಯವು ಶಿಕ್ಷಣ ಕಾಯಕದಲ್ಲಿ ನಿರತವಾಗಿದೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈರವರು ಹೇಳಿದರು. ಅವರು ಜೂ.8 ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವವನ್ನು ದೀಪಬೆಳಗಿಸಿ, ಉದ್ಘಾಟಿಸಿ, ಮಾತನಾಡಿ ಇಂದಿನ ಶಿಕ್ಷಣ ಪದ್ಧತಿ ತುಂಬಾ ಅರ್ಥಪೂರ್ಣವಾಗಿದೆ, ನಮ್ಮ ಸಂಸ್ಥೆಯಲ್ಲಿ ಹೊಸದಾಗಿ ಸೇರ್ಪಡೆಯಾದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಕಲಿಕೆಯೊಂದಿಗೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವಂತೆ ಸಲಹೆಯನ್ನು ನೀಡಿದರು.

ಶಿಸ್ತುಬದ್ಧವಾದ ಕಲಿಕೆ-ಅಶ್ವಿನ್ ಎಲ್ ಶೆಟ್ಟಿ
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಆಶ್ವಿನ್ ಎಲ್ ಶೆಟ್ಟಿರವರು ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಶಿಸ್ತುಬದ್ಧವಾದ ಕಲಿಕೆಗೆ ಅದ್ಯತೆ ಇದ್ದು, ವಿದ್ಯಾರ್ಥಿಯ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಆಧುನಿಕ ರೀತಿಯ ಎಲ್ಲಾ ಸೌಲಭ್ಯವಿದೆ ಎಂದು ಹೇಳಿದರು.

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಹಾಗೂ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್ ರೈರವರುಗಳು ಸಂದಭೋಚಿತವಾಗಿ ಮಾತನಾಡಿದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಟ್ರಸ್ಟಿ ಎನ್.ಸುಂದರ ರೈರವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೆಮಹಿತ್ ಸ್ವಾಗತಿಸಿ, ಪ್ರಣವ್ ವಂದಿಸಿದರು, ಸಾಕ್ಷಿ ಮತ್ತು ಬಳಗದವರು ಪ್ರಾರ್ಥನೆಗೈದರು.

ಮೆರವಣಿಗೆ ಉದ್ಘಾಟನೆ
ಸವಣೂರು ಜಿನಬಸದಿಯಿಂದ ಮುಖ್ಯರಸ್ತೆಯಾಗಿ ವಿದ್ಯಾರಶ್ಮಿ ವಿದ್ಯಾಲಯದ ತನಕ ವಿದ್ಯಾರ್ಥಿಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈಯವರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆಗೈದರು. ಸವಣೂರು ಜಿನ ಬಸದಿಯ ಅರ್ಚಕ ಶ್ರೇಯಾಂಸ್ ಇಂದ್ರ, ಸಂಸ್ಥೆಯ ಪ್ರಾಂಶುಪಾಲ ಸೀತಾರಾಮ ಕೇವಳ, ಟ್ರಸ್ಟಿ ಸುಂದರ ರೈ ಸವಣೂರು, ಸಂಸ್ಥೆಯ ಶಿಕ್ಷಕರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.