ಪುಂಜಾಲಕಟ್ಟೆ: ಸಂದರ್ಶನವನ್ನು ಎದುರಿಸುವ ಹಾಗೂ ರೆಸ್ಯೂಂ ಅನ್ನು ಬರೆಯುವುದರ ಬಗೆಗಿನ ಮಾಹಿತಿ ಕಾರ್ಯಾಗಾರ

0

ಪುಂಜಾಲಕಟ್ಟೆ: ಸರಕಾರಿ ದರ್ಜೆ ಕಾಲೇಜು ಪುಂಜಾಲಕಟ್ಟೆ ವಾಣಿಜ್ಯ ಸಂಘ ಹಾಗೂ ಉದ್ಯೋಗ ಕೋಶ ಇದರ ಸಂಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ಉದ್ಯೋಗಕ್ಕೆ ಉಪಕಾರಿಯಾಗುವಂತೆ “resume writing and interview facing” ಸಂಬಂಧಿಸಿದ ಕಾರ್ಯಾಗಾರವು ನ.3ರಂದು ಜರುಗಿತು.

ಈ ಕಾರ್ಯಕ್ರಮದಲ್ಲಿ ವಾಣಿಜ್ಯ ಸಂಘದ ಸಂಯೋಜಕರು ಡಾ.ವಿಶಾಲ್ ಪಿಂಟೋ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಅವರು ರೆಸ್ಯೂಮ್ ಬರೆಯುವ ಶೈಲಿ ಹಾಗೂ ಅದರ ಬಗ್ಗೆ ಮಾಹಿತಿ ನೀಡಿದರು. ಮತ್ತು ಉದ್ಯೋಗದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇಂಟರ್ ವ್ಯೂಗಳನ್ನು ಯಶಸ್ವಿಯಾಗಿ ಎದುರಿಸುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರು ಡಾ.ಟಿ ಶರತ್ ಕುಮಾರ್ ಹಾಗೂ ವಾಣಿಜ್ಯ ಇಲಾಖೆಯ ಮುಖ್ಯಸ್ಥ ಡಾ.ಲೋಕೇಶ್ ಹಾಗೂ ಎಲ್ಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here