HomePage_Banner
HomePage_Banner
HomePage_Banner

ಶಾಸಕರ ನಿಧಿಯಿಂದ ನೆಹರು ನಗರ ಜಂಕ್ಷನ್‌ಗೆ ಡಾಮರೀಕರಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ನೆಹರುನಗರ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಡಾಮರೀಕರಣವನ್ನು ಶಾಸಕ ಸಂಜೀವ ಮಠಂದೂರು ಅವರು ಪರಿಶೀಲಿಸಿದರು. ಕಳೆದ ಮಳೆಗಾಲದ ಅವಧಿಯಲ್ಲೂ ನೆಹರುನಗರ ಆಟೋ ರಿಕ್ಷಾ ನಿಲ್ಲುವ ಸ್ಥಳ ಮತ್ತು ಸುತ್ತಮುತ್ತ ಕೆಸರು ತುಂಬಿ ನಡೆದಾಡಲು ಆಗದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ಕುರಿತು ಅಲ್ಲಿ ಡಾಮರೀಕರಣ ಮಾಡಲು ಶಾಸಕರ ನಿಧಿಯನ್ನು ಬಳಸಲಾಗಿದೆ. ಬಿಜೆಪಿ ನಗರ ಮಂಡಲದ ಅಧ್ಯಕ್ಷರೂ ನಗರಸಭಾ ಸದಸ್ಯರೂ ಆಗಿರುವ ಜೀವಂಧರ್ ಜೈನ್, ಸದಸ್ಯರಾದ ವಸಂತ ಕಾರೆಕ್ಕಾಡು, ನವೀನ್ ಕುಮಾರ್, ಶಿವರಾಮ ಸಪಲ್ಯ, ಸ್ಥಳೀಯರಾದ ರಾಘವೇಂದ್ರ ಪ್ರಭು, ಪ್ರಶಾಂತ್ ಕಲ್ಲೇಗ, ಮನೋಹರ್ ಕಲ್ಲೇಗ, ನಗರಸಭಾ ಇಂಜಿನಿಯರ್ ದಿವಾಕರ್, ನಿತೇಶ್ ನೆಲಪ್ಪಾಲು, ಜಯಂತ್ ಕಲ್ಲೇಗ, ಶೀನಪ್ಪ ಪಡ್ಡಾಯೂರು, ಯುವರಾಜ್, ಸುದೇಶ್ ಅಜೇಯನಗರ, ಚಂದ್ರ ಕೊಡಿಪ್ಪಾಡಿ, ಭಾಸ್ಕರ, ಪ್ರೇಮದದಾಸ್ ಸಿಟಿಗುಡ್ಡೆ, ಶಾಸಕರರ ಆಪ್ತ ಕಾರ್ಯದರ್ಶಿ ವಸಂತ ವೀರಮಂಗಲ, ವಿಶ್ವನಾಥ ಕುಲಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.