ಪುತ್ತೂರು: ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಪುತ್ತೂರು ಶಾಖೆಯ ವತಿಯಿಂದ ಸದಸ್ಯರ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆ ಹಾಗೂ ಸಾಧಕ ವಿದ್ಯಾರ್ಥಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಇಲ್ಲಿನ ಶಿಕ್ಷಣ ಉದ್ಯೋಗ ಮಾಹಿತಿ ಕೇಂದ್ರ ಸಭಾಂಗಣದಲ್ಲಿ ನಡೆಯಿತು. ಪುತ್ತೂರು ಮಹಿಳಾ ಠಾಣೆಯ ಎಸ್.ಐ ನಂದಿನಿ ಉದ್ಘಾಟಿಸಿ ಶುಭ ಹಾರೈಸಿದರು. ದಲಿತ್ ಸೇವಾ ಸಮಿತಿಯ ಪುತ್ತೂರು ಶಾಖಾ ಸಮಿತಿ ಅಧ್ಯಕ್ಷ ರಾಜು ಹೊಸ್ಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಿಟ್ಲ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ 10ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಯತೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. 48 ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು.
ಸಭೆಯಲ್ಲಿ ನೆಲ್ಲಿಕಟ್ಟೆ ಈಶ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ, ಮಹಿಳಾ ಘಟಕದ ಗೌರವ ಅಧ್ಯಕ್ಷೆ ಲಲಿತಾ ನಾಯ್ಕ, ಅಧ್ಯಕ್ಷೆ ಅನುಸೂಯ ಕುಕ್ಕಾಡಿ, ಕೋಶಾಧಿಕಾರಿ ವೇದಾಕ್ಷಿ ಕುಂಬುರ್ಗ, ವೆಂಕಟೇಶ್ ದರ್ಬೆ, ಆನಂದ ದರ್ಬೆ, ಕೇಶವ ಕುಪ್ಲಾಜೆ, ಸುರೇಶ್ ತೋಟಂತಿಲ, ನಾರಾಯಣ ಪುರುಷರಕಟ್ಟೆ, ಕೃಷ್ಣಪ್ಪ ನಾಯ್ಕ ಮೊಟ್ಟೆತ್ತಡ್ಕ, ಆನಂದ ಕೌಡಿಚ್ಚಾರು ಸೀತಾರಾಮ ಕುಂಬುರ್ಗ ಮತ್ತಿತರರು ಉಪಸ್ಥಿತರಿದ್ದರು. ಆಶಾ ಕೌಡಿಚ್ಚಾರು ನಾಡಗೀತೆ ಹಾಡಿದರು. ತಾಲೂಕು ಉಪಾಧ್ಯಕ್ಷ ಮನೋಹರ ಕೋಡಿಜಾಲು ಸ್ವಾಗತಿಸಿದರು. ಸದಸ್ಯೆ ಲೀಲಾವತಿ ಕುಕ್ಕಾಡಿ ವಂದಿಸಿದರು. ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್ ಕಾರ್ಯಕ್ರಮ ನಿರೂಪಿಸಿದರು.