ಸೇಕ್ರೆಡ್ ಹಾರ್ಟ್ ಪ.ಪೂಕಾಲೇಜು ನಾಲ್ಡೆಜ್ ಫೇರ್ ಕಾರ್ಯಕ್ರಮ

0

ಮಡಂತ್ಯಾರು:ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘದಿಂದ ನಾಲ್ಡೆಜ್ ಫೇರ್ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.ಕಾವೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ|ಸಂತೋಷ್ ಪಿಂಟೊ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಾವೇ ಅವಕಾಶಗಳನ್ನು ಹುಡುಕಿಕೊಳ್ಳ ಬೇಕು. ಆ ಅವಕಾಶಗಳನ್ನೇ ಗುರಿಯನ್ನಾಗಿಸಿ ಕೊಂಡು ಶ್ರದ್ದೆ ಆಸಕ್ತಿಯಿಂದ, ಗುರುಹಿರಿಯರ ಸಲಹೆ ಮಾರ್ಗದರ್ಶನದಿಂದ ಯಶಸ್ಸನ್ನು ಕಾಣಲು ಸಾಧ್ಯವೆಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ವಂ|ಜೆರೊಮ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಸಂಘದ ನಿರ್ದೇಶಕರಾದ ಲಿಯೋ ನರೊನ್ಹಾ ಸ್ವಾಗತಿಸಿದರು.

ವಿದ್ಯಾರ್ಥಿಗಳಾದ ಕವನ ವಂದಿಸಿ, ಮೇವನ್,ಪ್ರಣಮ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪ್ರಯುಕ್ತ ಕೌನ್ ಬನೇಗಾ ಹಜಾರ್ ಪತಿ ರಸಪ್ರಶ್ನೆ ಕಾರ್ಯಕ್ರಮವನ್ನು ಉಪನ್ಯಾಸಕ ರೊಬಿನ್ ಸೆರ್ರಾ ನಡೆಸಿಕೊಟ್ಟರು. ವಾಣಿಜ್ಯ ಸಂಘದ ಸಹ ನಿರ್ದೇಶಕಿಯರಾದ ರೆನಿಶಾ ವೇಗಸ್, ಪ್ರಿಯಾ ಜ್ಯೋತಿ ಕುಟಿನ್ಹಾ ಸಹಕರಿಸಿದರು.

LEAVE A REPLY

Please enter your comment!
Please enter your name here