ಯುವ ಬಂಟರ ಸಂಘಟನೆಯು ಬಲಿಷ್ಠವಾಗಬೇಕು- ಪ್ರಕಾಶ್ ರೈ ಸಾರಕರೆ
ಪುತ್ತೂರು: ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜೂ. 16 ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭರದ ಸಿದ್ಧತೆಯನ್ನು ಮಾಡಲಾಗುತ್ತಿದೆ, ಜೂ. 8 ರಂದು ಜರಗಿದ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ರೈ ಸಾರಕರೆರವರು ಮಾತನಾಡಿ ಯುವ ಬಂಟರ ಸಂಘದ ಆಶ್ರಯದಲ್ಲಿ ಜೂ. 16 ರಂದು ನಡೆಯುವ ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಬಂಟ ಸಮಾಜ ಭಾಂದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಆಮೂಲಕ ಯುವ ಬಂಟರ ಸಂಘಟನೆಯು ಸಮಾಜದಲ್ಲಿ ಬಲಿಷ್ಠವಾಗಬೇಕು, ಪ್ರತಿಯೊಬ್ಬ ಯುವ ಬಂಟರು ಸಂಘಟನೆ ತಮ್ಮದು ಎಂಬ ಭಾವನೆಯಲ್ಲಿ ದುಡಿಯಬೇಕು ಎಂದು ಹೇಳಿದರು.
ಸಮಾಜಕ್ಕೆ ಆದರ್ಶವಾಗಿದೆ-ದಯಾನಂದ ರೈ ಮನವಳಿಕೆಗುತ್ತು
ಬಂಟರ ಯಾನೆ ನಾಡವರ ಮಾತೃಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಯುವ ಬಂಟರ ಸಂಘದ ಕಾರ್ಯಕ್ರಮಗಳು ಸಮಾಜಕ್ಕೆ ಆದರ್ಶವಾಗಿದೆ ಎಂದರು.
ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು- ಶಶಿಕುಮಾರ್ ರೈ ಬಾಲ್ಯೋಟು
ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ರೈ ಬಾಳ್ಯೊಟ್ಟು ರವರು ಮಾತನಾಡಿ ಯುವ ಬಂಟರ ಸಂಘವನ್ನು ಗ್ರಾಮ ಗ್ರಾಮಗಳಲ್ಲಿ ಬಲಿಷ್ಠವಾಗಿ ಬೆಳೆಸಬೇಕು, ಆಮೂಲಕ ಬಂಟ ಸಮುದಾಯದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು-ರಮೇಶ್ ರೈ ಡಿಂಬ್ರಿ
ಪುತ್ತೂರು ತಾಲೂಕು ಬಂಟರ ಸಂಘದ ಕೋಶಾಧಿಕಾರಿ ರಮೇಶ್ ರೈ ಡಿಂಬ್ರಿರವರು ಮಾತನಾಡಿ ಯುವ ಬಂಟರ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಬಂಟರ ಸಂಘವು ಪೂರ್ಣ ರೀತಿಯ ಸಹಕಾರವನ್ನು ನೀಡುತ್ತಿದ್ದು, ಸಂಘಟನೆಯಲ್ಲಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ತಾಲೂಕು ಯುವ ಬಂಟರ ಸಂಘದ ಕೋಶಾಧಿಕಾರಿ ಸದಾಶಿವ ಶೆಟ್ಟಿ ಮಾರಂಗ, ಜೊತೆ ಕಾರ್ಯದರ್ಶಿ ಕಿರಣ ವಿ ರೈ, ಹರಿಣಾಕ್ಷಿ ಜೆ.ಶೆಟ್ಟಿ ನೆಲ್ಲಿಕಟ್ಟೆ, ಲಾವಣ್ಯ , ಸನತ್ ರೈ ಏಳ್ನಾಡುಗುತ್ತು, ಪ್ರಸಾದ್ ರೈ ಪಟ್ಟೆ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪ್ರಜನ್ ರೈ, ಮಯೂರ್ ರೈ, ಯುವ ಬಂಟರ ಸಂಘದ ಮಾಧ್ಯಮ ಸಂಚಾಲಕ ಉಮಾಪ್ರಸಾದ್ ರೈ ನಡುಬೈಲು, ಯುವರಾಜ್ ಪೂಂಜ, ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ಭಾಸ್ಕರ್ ರೈ ಎಂ ಮತ್ತು ರವಿಚಂದ್ರ ರೈರವರುಗಳು ಉಪಸ್ಥಿತರಿದ್ದರು.