ಬಜಿರೆ: ಅಭಿವೃದ್ಧಿಯ ಕಾಮಗಾರಿಗಳ ಶಿಲಾನ್ಯಾಸ-ಉದ್ಘಾಟನೆ

0

ವೇಣೂರು: ಜೀರ್ಣೋದ್ಧಾರಗೊಳ್ಳುತ್ತಿರುವ ವೇಣೂರು ದೇವಸ್ಥಾನಕ್ಕೆ ಬಿಎಸ್‌ವೈ ಅವಧಿಯಲ್ಲಿ ರೂ. 55 ಲಕ್ಷ ಅನುದಾನ ತರಿಸಲಾಗಿದೆ. ಇದೀಗ ಮತ್ತೆ ರೂ. 5೦ ಲಕ್ಷವನ್ನು ವಾರದೊಳಗೆ ಒದಗಿಸಲು ಶ್ರಮವಹಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಗ್ರಾಮದ ಬತ್ತಾರು ಬಳಿ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಭಾಭವನಕ್ಕೆ ಶಿಲಾನ್ಯಾಸ ಹಾಗೂ ಬಜಿರೆ ಗ್ರಾಮದ ಪಾದೆಬೈಲು-ಗೋಳಿಯಂಗಡಿ ಸಂಪರ್ಕ ರಸ್ತೆಗೆ ನಿರ್ಮಾಣವಾದ ಕಾಂಕ್ರಿಟ್ ಕಾಮಗಾರಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮುದ್ದಾಡಿ ಕ್ಷೇತ್ರದ ಅಭಿವೃದ್ಧಿಗೆ ರೂ. 10 ಲಕ್ಷ ಒದಗಿಸುವುದಾಗಿ ಭರವಸೆ ನೀಡಿದ ಅವರು, ಹಿಂದೂ ಸಮಾಜದ ಆರಾಧನ ಕೇಂದ್ರಗಳಿಗೆ ಸರಕಾರದ ವ್ಯವಸ್ಥೆಯಡಿ ಶಕ್ತಿಮೀರಿ ಸಹಕಾರ ನೀಡಲು ಶ್ರಮಿಸುತ್ತೇನೆ ಎಂದರು.
ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಮುಖರಾದ ಸುರೇಶ್ ಕುಮಾರ್ ಆರಿಗ, ಸುಂದರ ಹೆಗ್ಡೆ ಬಿ.ಇ., ಎಸ್‌ಕೆಡಿಆರ್‌ಡಿಪಿ ವಲಯ ಮೇಲ್ವೀಚಾರಕಿ ಶಾಲಿನಿ, ಸುಬ್ರಹ್ಮಣ್ಯ ಶರ್ಮಾ, ಭರತ್‌ರಾಜ್ ಪಾಪುದಡ್ಕ, ಗ್ರಾ.ಪಂ. ಸದಸ್ಯರಾದ ಸುನಿಲ್ ಕುಮಾರ್, ಮಲ್ಲಿಕಾ ಹೆಗ್ಡೆ, ಲೋಕಯ್ಯ ಪೂಜಾರಿ, ಸುಚಿತ್ರಾ, ಸುಜಾತ, ಲೀಲಾವತಿ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಬಿಜೆಪಿ ಅಲ್ಪಸಂಖಾತ ಮೋರ್ಚಾದ ಅಧ್ಯಕ್ಷ ಅರುಣ್ ಕ್ರಾಸ್ತ ಸ್ವಾಗತಿಸಿ, ದಿನೇಶ್ ಪೂಜಾರಿ ಕಲ್ಪನೆ ನಿರೂಪಿಸಿದರು.

LEAVE A REPLY

Please enter your comment!
Please enter your name here