- ಸತ್ಯಸಾಯಿ ಮಂದಿರ ವಠಾರದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಎಮ್.ಇ. ಸುಬ್ರಹ್ಮಣ್ಯ
ಪುತ್ತೂರು: ಜಿಲ್ಲಾ ಅಂಧರ ಸೇವಾ ಸಂಘ ಮತ್ತು ಶ್ರೀ ಸತ್ಯಸಾಯಿ ಸೇವಾ ಸಮಿತಿಯ ವತಿಯಿಂದ ಅಂಧರ ಸೇವಾ ಸಂಘದ 236ನೇ ಉಚಿತ ನೇತ್ರ ತಪಾಸಣಾ ಶಿಬಿರ ಜೂ.9ರಂದು ಇಲ್ಲಿನ ಕೋರ್ಟು ರಸ್ತೆಯಲ್ಲಿನ ಶ್ರೀ ಸತ್ಯ ಸಾಯಿ ಮಂದಿರ ವಠಾರದಲ್ಲಿ ನಡೆಯಿತು.
ಜಿಲ್ಲಾ ಅಂದರ ಸೇವಾ ಸಂಘದ ಖಜಾಂಜಿ ಎಮ್.ಇ ಸುಬ್ರಹ್ಮಣ್ಯ ಅವರು ಶಿಬಿರವನ್ನು ಉದ್ಘಾಟಿಸಿ, ಮಾತನಾಡಿ ಫಲಾನುಭವಿಗಳ ಬಾಳಿನಲ್ಲಿ ಬೆಳಕು ಕಂಡಾಗ ಸಂಘದ ಉದ್ದೇಶ ಸಾರ್ಥಕ. ಈ ನಿಟ್ಟಿನಲ್ಲಿ ಅಂದರ ಸೇವಾ ಸಂಘದ ಮೂಲಕ ಉಚಿತ ನೇತ್ರ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದ ಅವರು ಶಿಬಿರದಿಂದ ಸಿಗುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ಡಾ. ಜಯರಾಮ ಶೆಟ್ಟಿ, ಡಾ. ಹೃಷಿಕೇಶ್ ಅಮೀನ್, ಡಾ. ನೆಲ್ಲಿ ನಝರತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಯ ಸಮಿತಿ ಸದಸ್ಯ ಡಾ. ಬಂಗಾರಡ್ಕ ವಿಶ್ವೇಶ್ವರ ಭಟ್ ಅವರು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಸಾಯಿಶ್ವರಿ ಮತ್ತು ಯಕ್ಷಿತಾ ಪ್ರಾರ್ಥಿಸಿದರು. ಟ್ರಸ್ಟ್ ಅಧ್ಯಕ್ಷ ಡಾ ಸತ್ಯಸುಂದರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಸಂಯೋಜಕ ರಘುನಾಥ ರೈ ವಂದಿಸಿದರು. ಮಂದಿರದ ಕಾರ್ಯದರ್ಶಿ ಪದ್ಮನಾಭ ನಾಯಕ್ ಕಾರ್ಯಕ್ರಮ ನಿರೂಪಿಸಿದರು.