ಬೆಳ್ತಂಗಡಿ ವಕೀಲರ ಸಂಘದ ಮಹಾಸಭೆ, ಸನ್ಮಾನ ಕಾರ್ಯಕ್ರಮ

0

ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘ (ರಿ). ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆಯು ನ.4ರಂದು ವಕೀಲರ ಭವನದ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಪ್ರಸಾದ್ ಕೆ.ಎಸ್‌ರವರು ಮುಂದಿನ ದಿನಗಳಲ್ಲಿ ಯುವ ವಕೀಲರಿರಗಾಗಿ ತರಬೇತಿ ಕಾರ್ಯಗಾರ, ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ ನಡೆಸಲು ಉದ್ದೇಶಿಸಲಾಗಿದೆ.

ನೂತನ ನ್ಯಾಯಾಲಯದ ಕಟ್ಟಡದ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆಯವರೊಂದಿಗೆ ಚರ್ಚಿಸಿದ್ದು ಕಡತ ಉನ್ನತ ಅಧಿಕಾರಿಗಳ ಹಂತದಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಕ್ಯಾಥೋಲಿಕ್ ಒಕ್ಕೂಟದ ಕರ್ನಾಟಕ ಪ್ರಾಂತ್ಯದ ಅಧ್ಯಕ್ಷರಾಗಿ ಆಯ್ಕೆಯಾದ ವಕೀಲರ ಸಂಘದ ಮಾಜಿ ಅಧ್ಯಕ್ಷ ಸೇವಿಯರ್ ಪಾಲೇಲಿಯವರನ್ನು ಸಂಘದ ಪರವಾಗಿ ಸನ್ಮಾಸಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಗಣೇಶ್ ಗೌಡರವರು ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಶೈಲೇಶ್ ಠೋಸರ್ ವಾರ್ಷಿಕ ವರದಿ ವಾಚಿಸಿದರು, ಕೋಶಾಧಿಕಾರಿ ಹರಿಪ್ರಕಾಶ್‌ಪಿ.ಎನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು ಕಾರ್ಯಕಾರಿ ಸಮಿತಿ ಸದಸ್ಯ ಮನೋಹರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕಾರ್ಯದರ್ಶಿ ದನಂಜಯ ಕುಮಾರ್ ಡಿ ವಂದಿಸಿದರು, ವೇದಿಕೆಯಲ್ಲಿ ಹಿರಿಯ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ,  ಜತೆ ಕಾರ್ಯದರ್ಶಿ ಪ್ರಿಯಾಂಕ ಕೆ, ಸಾಂಸ್ಕ್ರತಿಕ ಕಾರ್ಯದರ್ಶಿ ಮಮ್ತಾಜ್ ಬೇಗಂ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಕುಮಾರ್,  ಶ್ರೀನಿವಾಸ ಗೌಡ,  ಸುಭಾಶಿನಿ ಆರ್, ಮತ್ತು ಶಿವಯ್ಯ ಎಸ್.ಎಲ್ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here