ಪುತ್ತೂರು: ಬಡಗನ್ನೂರು ಗ್ರಾಮದ ಅರೆಪ್ಪಾಡಿ ನಿವಾಸಿ, ಪ್ರಗತಿಪರ ಕೃಷಿಕ ಕುಡಾಲುಗುತ್ತು ಸುಬ್ಬಣ್ಣ ರೈ(86ವ)ರವರು ಜೂ.7 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರ ಅಂತ್ಯಸಂಸ್ಕಾರವು ಜೂ. 8 ರಂದು ಬೆಳಿಗ್ಗೆ ನಡೆಯಿತು.
ಮೃತರು ಪತ್ನಿ ಕುರಿಕ್ಕಾರ ಸರಸ್ವತಿ ಎಸ್ ರೈ ಅರೆಪ್ಪಾಡಿ, ಮಕ್ಕಳಾದ ಹೇಮಾವತಿ, ಪದ್ಮನಾಭ, ನಾಗೇಶ್, ನಳಿನಿ, ಗೀತಾ, ಅಳಿಯಂದಿರಾದ ಮಿತ್ರಂಪಾಡಿ ಜಯರಾಮ ರೈ, ನೀರಳ ಜಯಚಂದ್ರ ರೈ, ಹರ್ಕಾಡಿಗುತ್ತು ದಿನೇಶ್ ರೈ, ಸೊಸೆಯಂದಿರಾದ ವಿನುತಾ ಪಿ ರೈ, ರಮ್ಯಾ ಎನ್ ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.