Home_Page_Advt
Home_Page_Advt
Home_Page_Advt

ಕರಾಯ ಎಸ್.ಡಿ.ಪಿ.ಐ. ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಶಿಕ್ಷಣವನ್ನು ಪ್ರೋತ್ಸಾಹಿಸುವ ಮೂಲಕ ಸಮಾಜವನ್ನು ರಕ್ಷಿಸುವಂತಾಗಬೇಕು ಎಂದು ಪುತ್ತೂರು ವಲಯ ಎಸ್.ಡಿ.ಪಿ.ಐ. ಅಧ್ಯಕ್ಷ ಅಬ್ದುಲ್ ರಝಾಕ್ ಸೀಮಾ ಹೇಳಿದರು. ಅವರು ಕರಾಯದಲ್ಲಿ ಎಸ್.ಡಿ.ಪಿ.ಐ. ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಬಡ ವಿದ್ಯಾರ್ಥಿಗಿಗೆ ಉಚಿತ ಪುಸ್ತಕ ವಿತರಣಾ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿ ಪಥದತ್ತ ಸಾಗುವಾಗ ಶ್ರೀಮಂತ ವರ್ಗದ ಜೊತೆಗೆ ಇತರ ವರ್ಗದ ಬಡ ಮಕ್ಕಳನ್ನು ಗೌರವಿಸುವಂತಾಗುವಲ್ಲಿ ಉಚಿತ ಪುಸ್ತಕ ವಿತರಣೆಯಲ್ಲಿ ಬಾಂಧವ್ಯ ಹೆಚ್ಚಿರುತ್ತದೆ ಎಂದರು.

ಕರಾಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕ ಬೊಮ್ಮಯ್ಯ ಬಂಗೇರ ಮಾತನಾಡಿ ವಿದ್ಯಾಭ್ಯಾಸವುಳ್ಳ ಪಠ್ಯ ಪುಸ್ತಕಗಳ ಓದುವಿಕೆಯಿಂದ ಜ್ಞಾನ ವೃದ್ಧಿಸಲು ಸಾಧ್ಯ ಎಂದು ಹೇಳಿದರು.

ಕರಾಯ ಎಸ್.ಡಿ.ಪಿ.ಐ. ವಲಯ ಅಧ್ಯಕ್ಷ ಸೇಕುಂಞ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಪುಸ್ತಕ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಫಲಾನುಭವಿಗಳು ಸರಿಯಾದ ರೀತಿಯಲ್ಲಿ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಪದಾಧಿಕಾರಿಗಳಾದ ಇಕ್ಬಾಲ್, ಉಮ್ಮರ್ ಉಪಸ್ಥಿತರಿದ್ದರು.  ಕರಾಯ ಎಸ್.ಡಿ.ಪಿ.ಐ. ವಲಯ ಪ್ರಧಾನ ಕಾರ್‍ಯದರ್ಶಿ ಇಲಿಯಾಸ್ ಕರಾಯ ಸ್ವಾಗತಿಸಿ, ಜಮಾಲ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.