ನ.14: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಮಡಂತ್ಯಾರ್ ಶಾಖೆ ಉದ್ಘಾಟನೆ

0

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಆದರ್ಶ ವಿವಿದ್ದೋದ್ದೇಶ ಸಹಕಾರ ಸಂಘವು ಕೇಂದ್ರ ಕಚೇರಿಯನ್ನು ಪುತ್ತೂರು ತಾಲೂಕಿನ ದರ್ಬೆಯಲ್ಲಿ ಹೊಂದಿಕೊಂಡು 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 12 ಶಾಖೆಗಳು ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾರ್ಯಾಚರಿಸುತ್ತಿದ್ದು 13 ನೇ ಶಾಖೆ ನ.14 ರಂದು ಮಡಂತ್ಯಾರ್ ನಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸಹಕಾರಿ ಧುರೀಣ ಕೆ. ಸೀತಾರಾಮ ರೈ ಸವಣೂರು ಹೇಳಿದರು. ಅವರು ನ.7 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದ ಜನರಿಗೆ ಸೇವೆ ಸಲ್ಲಿಸುವ ದೃಷ್ಟಿಯಿಂದ 12 ಶಾಖೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಾದ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಪಟ್ಟ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ ಮತ್ತು ಮೊಳುವಾರು ಪ್ರದೇಶಗಳಲ್ಲಿ ತೆರೆದಿರುತ್ತದೆ. ಇದೀಗ ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲಿ ತನ್ನ 13 ನೇ ಶಾಖೆಯ ಉದ್ಘಾಟನೆಗೊಳ್ಳಲಿದೆ.

2021-22 ನೇ ಸಾಲಿನಲ್ಲಿ 506 ಕೋಟಿ 59 ಲಕ್ಷದಷ್ಟು ವ್ಯವಹಾರ ನಡೆಸಿ ದಾಖಲೆಯರೂ.1 ಕೋಟಿ 20 ಲಕ್ಷಕ್ಕೂ ಮೇಲಿನ ಲಾಭಾಂಶಗಳಿಸಿರುತ್ತದೆ. ಪ್ರಸ್ತುತ ಸಂಘದಲ್ಲಿ 7635 ಸದಸ್ಯರಿದ್ದು, ಒಟ್ಟು ಪಾಲು ಬಂಡವಾಳ 2.69 ಕೋಟಿಯಷ್ಟು ಹೊಂದಿರುತ್ತದೆ. ಸಂಘವು ಪ್ರಸಕ್ತ 104.85 ಕೋಟಿಯಷ್ಟು ಠೇವಣಾತಿಯನ್ನು ಹೊಂದಿದ್ದು, ರೂ. 80.55 ಕೋಟಿಯಷ್ಟು ವಿವಿಧ ರೀತಿಯ ಸಾಲಗಳಾದ ಜಾಮೀನು ಸಾಲ, ಅಡಮಾನ ಸಾಲ, ಗೃಹ ಸಾಲ, ವಾಹನ ಸಾಲ, ಆಭರಣ ಸಾಲ, ಉಚಾಪತಿ ಸಾಲ ಹಾಗೂ ಇನ್ನಿತರ ಸಾಲಗಳ ಮೂಲಕ ಸಾಲವನ್ನು ನೀಡಿರುತ್ತದೆ.

ಸಪ್ತಾಹದಲ್ಲಿ 2017-18 ನೇ ಸಾಲಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ’ ಎಂದು ಪ್ರಶಸ್ತಿ ಪತ್ರ ಪಡೆದುಕೊಂಡಿರುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರಿಂದ 3 ಸಲ “ಸಾಧನಾ ಪ್ರಶಸ್ತಿ” ಪಡೆದುಕೊಂಡು ಸಹಕಾರಿ ಕ್ಷೇತ್ರದಲ್ಲಿ ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿರುತ್ತದೆ.

ಮಡಂತ್ಯಾರ್ ಶಾಖೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಡಂತ್ಯಾರ್ ಸೆಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರು ರೆ. ಫಾ. ಬೇಸಿಲ್ ವಾಸ್, ಭದ್ರತಾ ಕೊಠಡಿಯನ್ನು, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಸುಸ್ಸಾನ, ಕಂಪ್ಯೂಟರ್ ಉದ್ಘಾಟನೆ, ಪಾರೆಂಕಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ ವಿಠ್ಠಲ ಶೆಟ್ಟಿ ಮೂಡಯೂರು ಪ್ರಥಮ ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಇನ್ನಿತರ ಗಣ್ಯರು ಗೌರವ ಉಪಸ್ಥಿತರಿರುವರು ಎಂದರು. ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಕೆ. ರವೀಂದ್ರನಾಥ್ ಶೆಟ್ಟಿ ಕೇನ್ಯ, ಅಶ್ವಿನ್ ಎಲ್. ಶೆಟ್ಟಿ ಸವಣೂರು, ಎನ್. ರಾಮಯ್ಯ ರೈ ತಿಂಗಳಾಡಿ, ಜೈರಾಜ್ ಭಂಡಾರಿ ಪುತ್ತೂರು, ಮಹಾ ಪ್ರಬಂಧ ವಸಂತ್ ಜಾಲಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here