Home_Page_Advt
Home_Page_Advt
Home_Page_Advt

ಸವಣೂರು ಕೆ.ಸೀತಾರಾಮ ರೈಯವರ 72ನೇ ಹುಟ್ಟುಹಬ್ಬ ಆಚರಣೆ

Puttur_Advt_NewsUnder_1
Puttur_Advt_NewsUnder_1

ವರದಿ: ಉಮಾಪ್ರಸಾದ್ ರೈ ನಡುಬೈಲು


ಪುತ್ತೂರು: ಸಹಕಾರಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿರುವ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈಯವರ 72ನೇ ಹುಟ್ಟು ಹಬ್ಬ ಆಚರಣೆಯು ಅವರ ಸವಣೂರಿನ ರಶ್ಮಿ ನಿವಾಸದಲ್ಲಿ ಜೂ. 9ರಂದು ಜರಗಿತು.

ಹುಟ್ಟು ಹಬ್ಬ ಆಚರಣೆ
ಸವಣೂರು ಸೀತಾರಾಮ ರೈಯವರು ಕೇಕ್ ಕತ್ತರಿಸಿಕೊಂಡು, ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ತಮ್ಮ ನಿವಾಸದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆಯು ಜರಗಿತು.

ನಿಮ್ಮ ಪ್ರೀತಿ-ವಿಶ್ವಾಸವೇ ನನಗೆ ಶ್ರೀರಕ್ಷೆ-ಸವಣೂರು ಸೀತಾರಾಮ ರೈ
ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ಸೇವೆಗೈದ ನನಗೆ ಇಂದು 71 ವರ್ಷ ಪೂರ್ಣವಾಗಿ 72ರ ಹರೆಯಕ್ಕೆ ಕಾಲಿಟ್ಟಿದ್ದೇನೆ. ನನ್ನ ಎಲ್ಲಾ ಸಮಾಜಮುಖಿ ಕಾರ್‍ಯಕ್ಷೇತ್ರಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ನಿಮ್ಮ ಪ್ರೀತಿ-ವಿಶ್ವಾಸವೇ ನನಗೆ ಶ್ರೀರಕ್ಷೆಯಾಗಿದೆ, ನಿಮ್ಮ ಪೂರ್ಣ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿ, ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಶುಭಕೋರಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸೀತಾರಾಮ ರೈರವರ ಜೀವನ ಸಮಾಜಕ್ಕೆ ಆದರ್ಶ -ಸೀತಾರಾಮ ಕೇವಳ
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳರವರು ಸ್ವಾಗತಿಸಿ, ಮಾತನಾಡಿ ಗ್ರಾಮೀಣ ಕ್ಷೇತ್ರವಾಗಿರುವ ಸವಣೂರನ್ನು ಶಿಕ್ಷಣದ ಕಾಶಿಯಾಗಿ ಪರಿವರ್ತಿಸಿ, ಇಂದು ಕರ್ನಾಟಕದಲ್ಲೇ ವಿದ್ಯಾರಶ್ಮಿಯ ಹೆಸರನ್ನು ರಾರಾಜಿಸುವಂತೆ ಮಾಡಿರುವ ಸವಣೂರು ಸೀತಾರಾಮ ರೈರವರು ಸಮಾಜದ ಸರ್ವಜನರ ಪ್ರೀತಿಗೆ ಭಾಜನರಾಗಿದ್ದಾರೆ. ಬಡವ-ಬಲ್ಲಿದ ಎಂಬ ಭೇದವಿಲ್ಲದೇ ಎಲ್ಲರನ್ನು ಸಮಾನರಾಗಿ ಕಾಣುವ ಸೀತಾರಾಮ ರೈರವರ ಜೀವನ ಸಮಾಜಕ್ಕೆ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.

ಸೀತಾರಾಮ ರೈಯವರ ಪತ್ನಿ ಕಸ್ತೂರಿಕಲಾ ಎಸ್ ರೈ ಸವಣೂರು, ಪುತ್ರ ಡಾ.ರಾಜೇಶ್ ರೈ ಮಂಗಳೂರು, ಅಳಿಯ ಆಶ್ವಿನ್ ಎಲ್ ಶೆಟ್ಟಿ, ಪುತ್ರಿ ರಶ್ಮಿ ಎಲ್ ಶೆಟ್ಟಿ ಮಂಗಳೂರು, ಸೊಸೆ ಆಶ್ವಿತಾ ಆರ್ ರೈ , ಮೊಮ್ಮಕ್ಕಳಾದ ಅರ್ಥವ ಶೆಟ್ಟಿ, ಅವಿ ಶೆಟ್ಟಿ, ಸಹೋದರಿ ಶಾರದಾ ಶೆಟ್ಟಿ, ಸಹೋದರ ಜಯಪ್ರಕಾಶ್ ರೈ ಎನ್ ಸುಳ್ಯ ಹಾಗೂ ಶಾಂಭವಿ ರೈ, ಲೀಲಾವತಿ ಶೆಟ್ಟಿ, ಸುಖಲತಾ ಜೆ.ರೈ, ಡಾ.ಅಮಿತಾ ಮಾರ್ಲರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸವಣೂರಿನ ಉದ್ಯಮಿ ಸವಣೂರು ಎನ್ ಸುಂದರ ರೈ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಗ್ರಾ,ಪಂ, ಅಧ್ಯಕ್ಷೆ ಇಂದಿರಾ ಬಿ,ಕೆ, ಹಾಜಿ ಅಬ್ಬುಲ್ ರಹಿಮಾನ್ ಬೈತಡ್ಕ, ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು, ಜನಪ್ರತಿನಿಧಿಗಳು, ಹಿತೈಷಿಗಳು ಹಾಗೂ ಊರವರು ಸೇರಿದಂತೆ ಸುಮಾರು ೩೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.