ಕಡಬ ಠಾಣೆಯಲ್ಲಿ ದಲಿತರ ಕುಂದು ಕೊರತೆ ಸಭೆ: ದಲಿತ ಕಾನೂನು ದುರ್ಬಳಕೆ ಆರೋಪ

ಪುತ್ತೂರು: ದಲಿತ ಪರ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ದಲಿತರನ್ನು ದಮನಿಸುವ ಕಾರ್ಯ ನಡೆಯುತ್ತಿದೆ ಇದಕ್ಕೆ ಪೋಲೀಸರು ಆಸ್ಪದ ನೀಡಬಾರದು ಎಂದು ದಲಿತ ಸಂಘಗಳ ಮುಖಂಡರು ಅಕ್ರೋಶ ವ್ಯಕ್ತಪಡಿಸಿದರು.

ಕಡಬ ಠಾಣೆಯಲ್ಲಿ ಜೂ. 9 ರಂದು ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರು ಕಡಬ  ಪೊಲೀಸ್ ವ್ಯವಸ್ಥೆಯ ವಿರುದ್ಧತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡವರು ದಲಿತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಡಬ ತಾಲೂಕು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ವಸಂತ ಕುಬಲಾಡಿ ಮಾತನಾಡಿ ಇತ್ತೀಚೆಗೆ ಕಡಬ ಸಮೀಪದ ಕೋಡಿಂಬಾಳದಲ್ಲಿ ಅಕ್ರಮಮರಳುಗಾರಿಕೆ ನಡೆಸುತ್ತಿರುವುದರ ಬಗ್ಗೆ ವರದಿ ಮಾಡಲು ತೆರಳಿದ ಪತ್ರಕರ್ತರೊಬ್ಬರಿಗೆ ಹಲ್ಲೆ ನಡೆಸಲಾಗಿತ್ತು, ಅದರ ಪ್ರಕರಣ ದಾಖಲಾಗುತ್ತಿದ್ದಂತೆ ಪತ್ರಕರ್ತರ ವಿರುದ್ಧ ದಲಿತ ಮಹಿಳೆಯನ್ನು ಬಳಕೆ ಮಾಡಿಕೊಂಡು ಲೈಂಗಿಕ ಕಿರುಕುಳ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ, ಇದು ಅನ್ಯಾಯ, ಈ ವಿಚಾರದ ಬಗ್ಗೆ ಪೋಲೀಸರು ತನಿಖೆ ಮಾಡದೆ ಪ್ರಕರಣ ದಾಖಲಿಸಬಾರದು ಎಂದು ದಲಿತ ಮುಖಂಡರು ಅಗ್ರಹಿಸಿದರು. ಇದಕ್ಕೆ ಉತ್ತರಿಸಿದ ಠಾಣಾಧಿಕಾರಿ ದೂರು ಕೊಟ್ಟಾಗ ಪ್ರಕರಣ ದಾಖಲಿಸುವುದು ನಮ್ಮ ಕರ್ತವ್ಯವಾಗಿದೆ, ಅದು ಏನಿದ್ದರೂ ಕೋರ್ಟ್ ನಿರ್ಧಾರ ಮಾಡುತ್ತದೆ, ಸತ್ಯಾಸತ್ಯಾತೆ ನ್ಯಾಯಾಲಯ ತೀರ್ಮಾಣ ಮಾಡುತ್ತದೆ ಎಂದರು. ಅಕ್ರಮಗಳ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡುವಂತಿಲ್ಲ, ಯಾಕೆಂದರೆ ಅಕ್ರಮ ಮರಳುಗಾರಿಕೆ, ಜೂಜಾಟ, ಇನ್ನಿತರ ವಿಚಾರಗಳ ಬಗ್ಗೆ ಪೋಲೀಸರಿಗೆ ಮಾಹಿತಿನೀಡಿದರೆ ಪೋಲೀಸರೇ ಮಾಹಿತಿ ಸೋರಿಕೆ ಮಾಡುತ್ತಿದದ್ದಾರೆ. ಪೋಲೀಸರು ಸ್ಥಳಕ್ಕೆ ಬರುವಹೊತ್ತಿಗೆ ದಂಧೆ ಕೋರರು ಪರಾರಾಯಾಗಿರುತ್ತಾರೆ, ಎಂದು ವಸಂತ ಕುಬಲಾಡಿ ಹೇಳಿದಾಗ ಠಾಣಾಧಿಕಾರಿಯವರು ಈವಿಚಾರವನ್ನು ಅಲ್ಲಗಳೆದರು, ಇದಕ್ಕೆಉತ್ತರಿಸಿದ ವಸಂತ ಕುಬಲಾಡಿ ಮಾಹಿತಿ ಸೋರಿಕೆಯಾದ ಆಡಿಯೋ ನನ್ನಲ್ಲಿ ಇದೆ, ಬೇಕಾದರೆ ಕೊಡುತ್ತೇನೆ ಎಂದು ಹೇಳಿದಾಗ ಠಾಣಾಧಿಕಾರಿಯವರು ಸುಮ್ಮನಾದರು. ದಲಿತ ಮುಖಂಡೆ ಸುಗುಣ ದೇವಯ್ಯ ಮಾತನಾಡಿ ಹೊಸ್ಮಠದಲ್ಲಿ ಅಂಗಡಿ ಭಸ್ಮ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೆ ಆರೋಪಿಯನ್ನು ಬಂದಿಸಿಲ್ಲ, ದೂರು ನೀಡಿ ತಿಂಗಳುಗಟ್ಟಲೆ ಆದರೂ ಆರೋಪಿ ಬಂಧಿಸದೆ ಇರುವ ಕಾರಣ ಸಾಕ್ಷ್ಯ ನಾಶವಾಗಲು ಸಾಧ್ಯವಾಯಿತು. ಶಂಕಿತ ಆರೋಪಿ ಈಗಲೂ ನಮಗೆ ಬೆದರಿಕೆ ಹಾಕುತ್ತಿದ್ದಾರೆ ನಾವು ಮತ್ತೆ ಅಂಗಡಿ ತೆರೆಯುತ್ತೇವೆ ಅವತ್ತು ಏನಾದರೂ ತೊಂದರೆಯಾದರೂ ಅದಕ್ಕೆ ಶಂಕಿತ ಆರೋಪಿಯೇ ಹೋಣೆಯಾಗುತ್ತಾರೆ ಎಂದು ಅಕ್ರೋಶ ವ್ಯಕ್ತಪಡಸಿದರು.

ನೂಜಿಬಾಳ್ತಿ ಕಾಲೋನಿಗಳಲ್ಲಿ ಯುವಕರು ಕುಡಿತದ ಚಟಕ್ಕೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಲ್ಳುತತಿದ್ದಾರೆ, ಈಗಾಗಲೇ ಕೆಲವರು ಜೀವ ಕಳೆದುಕೊಡಿದ್ದಾರೆ. ದಿನ ನಿತ್ಯ ಗಳಾಟೆ ನಡೆಸುತ್ತಿದ್ದಾರೆ ಬೀಟ್ ಪೋಲೀಸರು ಈ ಬಗ್ಗೆ ಗಮನ ಹರಿಸಬೇಕು ಎಂದು ದಿತರು ಅಗ್ರಹಿಸಿದರು. ಇತ್ತೀಚೆ ವೃದ್ದರೊಬ್ಬರಿಗೆ ಪೋಲೀಸ್ ಸಬ್ಬಂದಿ ಪಂಪಾಪತಿ ಹಲ್ಲೆನಡೆಸಿದ ಪ್ಕರಣಕ್ಕೆ ಸಂಬಂಧಪಟ್ಟಂತೆ ಅವರ ವಿರುದ್ದ ಕ್ರಮಜರಗಿಸುವ ಭರವಸೆ ನೀಡಲಾಗಿತ್ತು ಅದು ಏನಾಯತು ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಠಾಣಾಧಿಕರಾಯವರು ಜೀನ್ 31ರ ಒಳಗೆ ಕ್ರಮ ಜರಗಿಸಲಾಗುತ್ತದೆ ಎಂದರು.

ದಲಿತ ಮುಖಂಡರಾದ ಆನಂದ ಹೊಸಮಠ, ಧರ್ಮಪಾಲಪುಣ್ಚತ್ತಾರು, ಶೇಖರ ಮರುವಂತಿಲ, ಸುಂದರ ಚಾರ್ವಾಕ, ಓಮರಕಲ್ಲುಗುಡ್ಡೆ,ರೋಹಿ ಬನಾರಿ, ಕುಶಾಲಪ್ಪ ದೋಂತಿಲಡ್ಕ, ಅನ್ನು ಕಳೆಂಜೋಡಿ, ತನಿಯಪಪ್ ಸಂಪಡ್ಕ, ಆನಂದ ಮುಧ್ವ, ಚನ್ನ ನಿರಾರಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು ಠಾಣಾ ಎ.ಎಸ್.ಐ ಸುರೇಶ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.