HomePage_Banner
HomePage_Banner
HomePage_Banner

ಕಲರ್ಸ್ ಕನ್ನಡದ ‘ಇಷ್ಟ ದೇವತೆ’ ಧಾರಾವಾಹಿಯಲ್ಲಿ ಉಮೇಶ್ ರೈ ನಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಿವಧ್ವಜ್ ಶೆಟ್ಟಿ ಮತ್ತು ಪ್ರಶಾಂತ್‌ರವರು ನಿರ್ಮಿಸಿರುವ ನ್ನಡದ ಖ್ಯಾತ ನಟಿಯರಾದ ಪ್ರಿಯಾಂಕ ಉಪೇಂದ್ರ, ಭವ್ಯ, ವೈ ಜಯಂತಿ ಕಾಶಿ, ಸೀತಾಕೋಟೆ, ರಾಶಿ ಬಾಲಕೃಷ್ಣ ಹಾಗೂ ಮಹಾದೇವ್ ತಾರಾಗಣದಲ್ಲಿ ಲೈಮ್ ಲೈಟ್ ಪ್ರೊಡಕ್ಷನ್‌ರವರವರಿಂದ ಕಲರ್ಸ್ ಕನ್ನಡ ಚಾನಲ್‌ನಲ್ಲಿ ಪ್ರತೀ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30 ಕ್ಕೆ ಪ್ರಸಾರವಾಗುವ ‘ಇಷ್ಟ ದೇವತೆ’ ಧಾರವಾಹಿಯಲ್ಲಿ ಉಮೇಶ್ ಕುಮಾರ್ ರೈಯವರು ನಟಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಉದಯ ಟಿವಿ ಹಾಗೂ ಈ ಟಿವಿಯಲ್ಲಿ ಪ್ರಸಾರವಾಗುತಿದ್ದ `ಮಿಂಚು’ ಹಾಗೂ `ಸಂಬಂಧ’ ಧಾರವಾಹಿಯಲ್ಲಿ ಮತ್ತು ‘ಕರೆಯೇ ಕೋಗಿಲೆ ಮಾಧವನ’, `ಅತೀಥ’ ಹಾಗೂ `ನಿರ್ದೋಷಿ’ ಚಲನಚಿತ್ರಗಳಲ್ಲಿ ನಟಿಸಿದ ಅನುಭವ ಹೊಂದಿರುವ ಉಮೇಶ್ ರೈಯವರು ಇದೀಗ ಧಾರವಾಹಿಯ ಒಂದು ಪಾತ್ರಕ್ಕಾಗಿ ಮತ್ತೆ ಬಣ್ಣ ಹಚ್ಚಿದ್ದಾರೆ.

ಕಡಬದ ಅರ್ಪಾಜೆ ದಿ.ಸಂಜೀವ ರೈ ಮತ್ತು ದೇವಕಿ. ಯಸ್.ರೈಯವರ ಮಗ ಹಾಗೂ ಪುತ್ತೂರು ಕೋಡಿಂಬಾಡಿಯ ಸಂಪಿಗೆದಡಿ-ಮಠಂತಬೆಟ್ಟು ಸದಾಶಿವ ಸಾಮಾನಿಯವರ ಮಗಳಾದ ರೂಪರವರ ಪತಿಯಾಗಿರುವ ಉಮೇಶ್ ರೈಯವರು ಬಾಲ್ಯದಲ್ಲಿಯೇ ಯಕ್ಷಗಾನ ಮತ್ತು ನಾಟಕ ಕಲಾವಿದರಾಗಿದ್ದು ಉತ್ತಮ ಗಾಯಕರೂ ಆಗಿದ್ದಾರೆ. ಇವರು ಹಲವಾರು ಸಿನಿಮಾ ಮತ್ತು ಧಾರವಾಹಿಗಳಿಗೆ ಸಹ ನಿರ್ಮಾಪಕ ಹಾಗೂ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ ಅನುಭವವನ್ನೂ ಹೊಂದಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.