HomePage_Banner
HomePage_Banner

ಸರ್ವೆ ರಸ್ತೆ ಬದಿ ತ್ಯಾಜ್ಯ, ಅಂಗಡಿಗಳಲ್ಲಿ ಅಕ್ರಮ ಮದ್ಯ – ಕ್ರಮಕ್ಕೆ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಂಪ್ಯ ಪೊಲೀಸ್ ಠಾಣೆಯಲ್ಲಿ ದಲಿತ ಕುಂದು ಕೊರತೆ ಸಭೆ

ಪುತ್ತೂರು: ಸರ್ವೆ ರಸ್ತೆ ಬದಿಯಲ್ಲಿ ಸತ್ತ ನಾಯಿ, ಕೋಳಿಗಳ ತ್ಯಾಜ್ಯಗಳನ್ನು ಎಸೆದು ಪರಿಸರಕ್ಕೆ ಹಾನಿ ಮಾಡುತ್ತಿರುವವರ ಮತ್ತು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರು ಆಗ್ರಹಿಸಿದ್ದಾರೆ.

ಜು.9ರಂದು ಸಂಪ್ಯ ಪೊಲೀಸ್ ಠಾಣೆ ಎಸ್.ಐ ಸಕ್ತಿವೇಲು ಅವರ ಅಧ್ಯಕ್ಷತೆಯಲ್ಲಿ ಠಾಣೆಯ ಹಾಲ್‌ನಲ್ಲಿ ಸಭೆ ನಡೆಯಿತು. ಸರ್ವೆ ರಸ್ತೆ ಕಾಲೋನಿ ಪರಿಸರದಲ್ಲಿ ರಾತೋ ರಾತ್ರಿ ಸತ್ತ ನಾಯಿ, ಕೋಳಿ ತ್ಯಾಜ್ಯಗಳನ್ನು ಎಸೆಯುತ್ತಾರೆ. ಮಾರಕ ಖಾಯಿಲೆಗಳು ಈಗಾಗಲೇ ಕೆಲವು ಕಡೆಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ರಾಶಿ ಹಾಕಿದ ತ್ಯಾಜ್ಯದಿಂದಾಗಿ ರೋಗ ರುಜಿನಗಳು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾತ್ರಿ ಪಾಲಯದಲ್ಲಿ ಈ ಭಾಗದಲ್ಲಿ ಸಂಚರಿಸಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚುವಂತೆ ಸಭೆಯಲ್ಲಿ ಪ್ರಸ್ತಾಪವಾಯಿತು. ಇದೇ ಪರಿಸರದಲ್ಲಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಎಸ್.ಐ ಅವರ ಮಗನಕ್ಕೆ ತರಲಾಯಿತು. ಉತ್ತರಿಸಿದ ಎಸ್.ಐ ಸಕ್ತಿವೇಲು ಅವರು ಈ ಕುರಿತು ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಶಾಲಾ ಮಕ್ಕಳಿಗೆ ಚುಡಾವಣೆ:
ಸರ್ವೆ ಸೊರಕೆ ಕಾಲೋನಿ ಪರಿಸರದಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳನ್ನು ಚುಡಾಯಿಸುತ್ತಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ನಮಗೆ ತಿಳಿಸಿದ್ದಾರೆ ಎಂದು ಪೊಷಕರು ಸಭೆಯಲ್ಲಿ ಪ್ರಸ್ತಾಪ ಮಾಡಿದರು. ಎಸ್.ಐ ತನಿಖೆ ನಡೆಸುವ ಭರವಸೆ ನೀಡಿದರು.

ಕಾಲು ದಾರಿಯಾದರೂ ಕೊಡಿಸಿ:
ಕೆಯ್ಯೂರು ತೆಗ್ಗು ಸಮೀಪ ಎರೆಕ್ಕಳ ಕಾಲೋನಿಗೆ ಹೋಗಲು ಸರಿಯಾದ ರಸ್ತೆ ಸೌಕರ್ಯವಿಲ್ಲ. ಇರುವ ದಾರಿಯನ್ನು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಉತ್ತರಿಸಿದ ಎಸ್.ಐ ಅಗತ್ಯ ಕ್ರಮ ಕೈಗೊಂಡು ದಾರಿಯ ಕುರಿತು ಸ್ಥಳ ಪರಿಶೀಲಿಸುತ್ತೇನೆ ಎಂದರು. ಸಭೆಯಲ್ಲಿ ಪ್ರೊಬೆಷನರಿ ಎಸ್.ಐ ಮಾಂತೇಶ್ ಉದಯ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಗಿರಿಧರ್, ಸುಮತಿ, ಉಮೇಶ್, ಪ್ರಮೋದ್ ತಿಂಗಳಾಡಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಠಾಣೆಯ ಸಿಬಂದಿ ದಿನೇಶ್ ಅವರು ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.