ಲಂಡನ್ನ ಓವೆಲ್ನಲ್ಲಿ ಜೂ.9ರಂದು ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಭಾರತ 5 ವಿಕೇಟ್ ನಷ್ಟಕ್ಕೆ 352 ರನ್ ದಾಖಲಿಸಿದೆ.
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲಿ ಶಿಖರ್ ಧವನ್, ರೋಹಿತ್ ಶರ್ಮ ಜೋಡಿ ನಿಧಾನವಾಗಿ ರನ್ಗಳಿಸಲು ಯತ್ನಿಸಿ ನಂತರ ರನ್ಮಿತಿಯನ್ನು ವೇಗಗೊಳಿಸುತ್ತಾ ಮೊದಲ ವಿಕೇಟ್ಗೆ 136 ಎಸೆತಗಳ ಮುಂದೆ 127 ರನ್ಗಳ ದಾಖಲೆಯ ಜೊತೆಯಾಟ ನಡೆಸಿದರು.
ಇವರಿಬ್ಬರು 16ನೇ ಬಾರಿ ಮೊದಲ ವಿಕೇಟಿಗೆ 100ರನ್ಗಳ ಜೊತೆಯಾಟ ಮಾಡಿದಂತಾಯಿತು. ರೋಹಿತ್ 20ರನ್ ಗಳಿಸುತ್ತಿದ್ದಂತೆ ಆಸ್ಟ್ರೇಲಿಯಾ ವಿರುದ್ಧ 2000 ರನ್ ಗಳಿಸಿದ ಭಾರತದ ಐದನೇ ಬ್ಯಾಟ್ಸ್ಮೆನ್ ಎನಿಸಿಕೊಂಡರು. ರೋಹಿತ್ ಶರ್ಮ 57 ರನ್ (70 ಬಾಲ್) ಗಳಿಸಿ ಔಟಾದರು. ನಂತರ ಕ್ರೇಸ್ಗೆ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ ಉತ್ತಮ ಆಟ ಮುಂದುವರಿಸಿದರು. ಧವನ್ ಆಕರ್ಷಕ ಶತಕ ಬಾರಿಸಿ ಕ್ರೀಡಾಪ್ರೇಮಿಗಳನ್ನು ರಂಜಿಸಿದರು. 109 ಎಸೆತಗಳಲ್ಲಿ16 ಬೌಂಡರಿ ಬಾರಿಸಿ 117 ರನ್ಗಳಿಸಿ ಔಟಾದರು.
ನಂತರ ಆಲ್ರೌಂಡರ್ ಹಾರ್ದಿಕ ಪಾಡ್ಯ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಆಸ್ಟ್ರೇಲಿಯಾ ಬೌಲರ್ಗಳನ್ನು ಹಿಗ್ಗಾಮುಗ್ಗಾ ಧಳಿಸಿ ಕೇವಲ 27 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್, 4 ಬೌಂಡರಿಗಳಿಂದ 48 ರನ್ಗಳಿಗೆ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದರು. ನಂತರ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ 14 ಎಸೆತದಲ್ಲಿ ಒಂದು ಸಿಕ್ಸರ್, 3 ಬೌಂಡರಿ ಬಾರಿಸಿ 27 ರನ್ಗೆ ಔಟಾದರು. ಕೊಹ್ಲಿ 77 ಎಸೆತಗಳ ಮುಂದೆ 2 ಸಿಕ್ಟರ್, 4 ಬೌಂಡರಿಗಳಿಂದ 82 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ರಾಹುಲ್ 3 ಎಸೆತದಲ್ಲಿ 1 ಬೌಂಡರಿ, 1 ಸಿಕ್ಟರ್ಗಳ ನೆರವಿನಿಂದ 11 ರನ್, ಕೇದರ್ ಜಾಧವ್ (0*) ಗಳಿಸಿ ಅಜೇಯರಾಗುಳಿದರು.
ಆಸ್ಟ್ರೇಲಿಯಾ ಪರ ಸ್ಟಾಯಿನಿಸ್ 2, ಕಮ್ಮಿನ್ಸ್, ಸ್ಟಾರ್ಕ್, ನೈಲ್ ತಲಾ 1 ವಿಕೇಟ್ ಪಡೆದರು.