ಬೆಳ್ತಂಗಡಿ: ನಂದಗೋಕುಲ ಗೋಶಾಲೆ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜದಲ್ಲಿ ನಂದಗೋಕುಲ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಸಮಾಲೋಚನಾ ಸಭೆ ನ.7ರಂದು ಎಸ್ ಡಿಎಂ ಸಭಾಭವನದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ನಂದಗೋಕುಲ ಗೋಶಾಲೆಯ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ನ ಅಧ್ಯಕ್ಷ ಡಾ.ಎಂ.ಎಂ ದಯಾಕರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಉಪನಿರ್ದೇಶಕರು ಡಾ.ಅರುಣ್ ಕುಮಾರ್, ಟ್ರಸ್ಟಿಗಳಾದ ರಮೇಶ್ ಪ್ರಭು, ಭಾಸ್ಕರ್ ಧರ್ಮಸ್ಥಳ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ,, ಕುಶಾಲಪ್ಪ ಗೌಡ ಪೂವಾಜೆ, ಪುರಣ್ ವರ್ಮ ಉಜಿರೆ, ಅಕ್ರಮ-ಸಕ್ರಮ ಸದಸ್ಯ ಜಯಂತ ಕೋಟ್ಯಾನ್ ಭಾಗಿಯಾಗಿದ್ದರು.
ತಾಲೂಕಿನಾದ್ಯಂತ ನಾಗರಿಕರು, ವಿವಿಧ ಸಂಘಟನೆಯ ಮುಖ್ಯಸ್ಥರು ಉಪಸ್ಥಿತರಿದ್ದರು.