ವೇಣೂರು-ಪೆರ್ಮುಡ ಕಂಬಳ ಸಮಿತಿಯ ಪೂರ್ವಭಾವಿ ಸಭೆ: ನಿತೀಶ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ 30ನೇ ವರ್ಷದ ಅದ್ದೂರಿ ಕಂಬಳ ಉತ್ಸವಕ್ಕೆ ಸಿದ್ದತೆ

0


ವೇಣೂರು: ಇತಿಹಾಸ ಪ್ರಸಿದ್ಧ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಜಿಲ್ಲಾ ಕಂಬಳ ಸಮಿತಿಯಿಂದ ದಿನ ನಿಗದಿಯಾಗಿದ್ದು, ಈ ಬಗ್ಗೆ ವೇಣೂರು-ಪೆರ್ಮುಡ ಕಂಬಳ ಸಮಿತಿಯ ಪೂರ್ವಭಾವಿ ಸಭೆಯು ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನ. 7ರಂದು  ಕಂಬಳ ಕ್ರೀಡಾಂಗಣದ ವಠಾರದಲ್ಲಿ ಜರುಗಿತು.

ಈ ಬಾರಿ ಡಿ. 3ರಂದು 30ನೇ ವರ್ಷದ ಕಂಬಳ ಕ್ರೀಡಾಚರಣೆ ಆಗಿದ್ದು, ಅದ್ದೂರಿಯಾಗಿ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಮಾಜಿ ಶಾಸಕ ಕೆ. ವಸಂತ ಬಂಗೇರವರ ಗೌರವಾಧ್ಯಕ್ಷತೆಯಲ್ಲಿ, ಜಿ.ಪಂ. ಮಾಜಿ ಸದಸ್ಯ ಶೇಖರ ಕುಕ್ಕೇಡಿಯವರ ಕಾರ್ಯಾಧ್ಯಕ್ಷತೆಯಲ್ಲಿ ಹೊನಲು ಬೆಳಕಿನ ಕಂಬಳವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಚರ್ಚಿಸಲಾಯಿತು. ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಕಂಬಳ ಅಭಿಮಾನಿಗಳು ಸಭೆಯಲ್ಲಿ ಹಾಜರಿದ್ದರು.

ವ್ಯವಸ್ಥಿತವಾಗಿ ನಡೆಯಲಿದೆ ಕಂಬಳ:

ಈ ಬಾರಿ 30ನೇ ವರ್ಷದ ಕಂಬಳ ಕ್ರೀಡೆಯನ್ನು ಅದ್ದೂರಿಯಾಗಿ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಕಂಬಳ ಕ್ರೀಡಾಂಗಣವನ್ನು ಸಿದ್ದಗೊಳಿಸಲಾಗುತ್ತಿದ್ದು, ಯಾವುದೇ ಅಡಚಣೆಯಿಲ್ಲದೆ ವ್ಯವಸ್ಥಿತವಾಗಿ ಎಲ್ಲರ ಸಹಕಾರದಿಂದ ಕಂಬಳ ನಡೆಯಲಿದೆ ವೇಣೂರು-ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷರು ನಿತೀಶ್ ಕೋಟ್ಯಾನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here