ಪುತ್ತೂರು: ರಾಜ್ಯ ಸಮ್ಮಿಶ್ರ ಸರಕಾರದ ಭೂ ಸ್ವಾಧೀನ ಕಾಯಿದೆಯನ್ನು ವಿರೋಧಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಜೂ.10 ರಂದು ನಡೆಯುತ್ತಿರುವ ರೈತ ಚಳುವಳಿಯಂತೆ ಪುತ್ತೂರಿನಲ್ಲಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬೆಳಿಗ್ಗೆ ಮಾಣಿ -ಮೈಸೂರು ಹೆದ್ದಾರಿಯನ್ನು ದರ್ಬೆ ಅಶ್ವಿನಿ ಹೊಟೇಲ್ ಬಳಿಯ ವೃತ್ತದಲ್ಲಿ ತಡೆದು ಭೂ ಸ್ವಾಧೀನ ಕಾಯಿದೆ ತಿದ್ದುಪಡಿಯನ್ನು ಹಿಂಪಡೆಯುವಂತೆ ಸರಕಾರವನ್ನು ಆಗ್ರಹಿಸಲಾಯಿತು.
ಮೊದಲಿಗೆ ರಸ್ತೆ ಬದಿಯಲ್ಲಿ ರೈತರಿಗೆ ನಡೆಯುತ್ತಿರುವ ಅನ್ಯಾದಯ ಕುರಿತು ರೈತ ಮುಂಖಡರು ಭಾಷಣ ಮಾಡಿ ಬಳಿಕ ರಾಜ್ಯ ಹೆದ್ದಾರಿಯ ಮಧ್ಯ ಭಾಗಕ್ಕೆ ಬಂದು ರಸ್ತೆ ಒಂದು ಭಾಗದಿಂದ ಇನ್ನೊಂದು ಭಾಗದ ತನಕ ರೈತರು ಸಾಲಾಗಿ ನಿಂತು ಮೈಸೂರು ರಸ್ತೆಯ ಕಡೆ ಮುಖ ಮಾಡಿ ರಸ್ತೆ ತಡೆ ಕೈಗೆತ್ತಿಕೊಂಡರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀಧರ್ ಶೆಟ್ಟಿಯವರು ಮಾತನಾಡಿದರು.