ಪುತ್ತೂರು: ಪುಣಚ ಗ್ರಾ.ಪಂ.ವ್ಯಾಪ್ತಿಯ ತೋರಣಕಟ್ಟೆ-ಆಜೇರು ಶಾಲೆ ಸಂಪರ್ಕ ರಸ್ತೆಗೆ ಡಾಮರೀಕರಣ ಮತ್ತು ಅಣವು ಗುಡ್ಡೆಗೆ ನೀರಿನ ವ್ಯವಸ್ಥೆಗೆ ಅಗ್ರಹಿಸಿ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಜೂ.10ರಂದು ಪುಣಚ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದರು.
ಪುತ್ತೂರು ತಾಲೂಕು ದಲಿತ್ ಸೇವಾ ಸಮಿತಿ ಅಧ್ಯಕ್ಷ ರಾಜು ಹೊಸ್ಮಠ , ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು, ಸಮಿತಿಯ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ತಿಮ್ಮಣ್ಣ ಆಜೇರು, ಸುರೇಶ್ ಆಜೇರು, ಕೃಷ್ಣ ನಾಯ್ಕ ಮಲ್ಯ, ಪ್ರಸಾದ್ ಅನಂತಾಡಿ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.