HomePage_Banner
HomePage_Banner
HomePage_Banner
HomePage_Banner

ಆ.11: ಪುತ್ತೂರಿನಲ್ಲಿ ಯುವವಾಹಿನಿ ವಾರ್ಷಿಕ ಸಮಾವೇಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪೂರ್ವ ಭಾವಿ ಸಭೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್

ಪುತ್ತೂರು: ಕರಾವಳಿ ಜಿಲ್ಲೆಗಳಲ್ಲಿ 34 ಘಟಕಗಳನ್ನು ಹೊಂದಿರುವ ಯುವವಾಹಿನಿ ಸಂಸ್ಥೆಯ ವಾರ್ಷಿಕ ಸಮಾವೇಶವನ್ನು ಈ ಬಾರಿ ಪುತ್ತೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪ್ರತೀ ವರ್ಷ ಒಂದೊಂದು ಭಾಗದಲ್ಲಿ ಸಮಾವೇಶ ನಡೆಯುತ್ತಾ ಬಂದಿದ್ದು, ಈ ಬಾರಿ ಆಗಸ್ಟ್ 11ರಂದು ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಿಶಾಲ ಗದ್ದೆಯಲ್ಲಿ ನಡೆಯಲಿದೆ.

ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರೂ, ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರೂ ಆದ ಜಯಂತ ನಡುಬೈಲ್ ಈ ವಿಷಯ ಪ್ರಕಟಿಸಿದರು. ಸದ್ಯದಲ್ಲೇ ಮೂಡಿಗೆರೆಯಲ್ಲಿ ಯುವವಾಹಿನಿಯ 35ನೇ ಘಟಕ ತೆರದುಕೊಳ್ಳಲಿದ್ದು, ಎಲ್ಲ 35 ಘಟಕಗಳು ಮತ್ತು ಬಿಲ್ಲವ ಸಂಘಗಳಿಂದ ಐದು ಸಾವಿರಕ್ಕಿಂತಲೂ ಅಧಿಕ ಮಂದಿ ಈ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದವರು ನುಡಿದರು.

ದೇವಳದ ಗದ್ದೆಯಲ್ಲಿ ಇದಕ್ಕಾಗಿ ಬೃಹತ್ ಸಭಾ ಚಪ್ಪರ ನಿರ್ಮಿಸಲಾಗುವುದು, ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಪುತ್ತೂರಿನ ಇತಿಹಾಸದಲ್ಲೇ ಅತ್ಯಂತ ಅಚ್ಚುಕಟ್ಟಾದ ಮತ್ತು ಮೆಗಾ ಸಮಾವೇಶವಾಗಿ ಸಂಘಟಿಸಲು ಸೂಕ್ತ ಉಪಕ್ರಮ ಕೈಗೊಳ್ಳಲಾಗುವುದು ಎಂದರು.

ಪೂರ್ವಾಹ್ನ 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಇದೇ ವೇಳೆ ನೋಂದಣಿ ನಡೆಯಲಿದೆ. 9.30ಕ್ಕೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸನ್ಮಾನ, ಪ್ರಶಸ್ತಿ ಪ್ರದಾನ, ಉಪನ್ಯಾಸ ಇತ್ಯಾದಿಗಳಿರುತ್ತವೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಇದೇ ಸಭಾ ಚಪ್ಪರದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ನಡುಬೈಲ್ ತಿಳಿಸಿದರು.

ಯುವವಾಹಿನಿ(ರಿ.) ಪುತ್ತೂರು ಇದರ ಅಧ್ಯಕ್ಷರಾದ ನಾರಾಯಣ ಪೂಜಾರಿ ಕುರಿಕ್ಕಾರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದ ನಿರ್ದೇಶಕರಾದ ಶಶಿಧರ ಕಿನ್ನಿಮಜಲ್ ಸಮಾವೇಶದ ರೂಪುರೇಶೆಗಳ ಬಗ್ಗೆ ವಿವರ ನೀಡಿದರು. ಪುತ್ತೂರು ಯುವವಾಹಿನಿ ಘಟಕದಲ್ಲಿ 280 ಸದಸ್ಯರಿದ್ದಾರೆ. ಪುತ್ತೂರಿನಲ್ಲಿ ಈ ಬಾರಿ ಸಮಾವೇಶ ನಡೆಯುತ್ತಿರುವ ಕಾರಣ ಈ ಎಲ್ಲ ಸದಸ್ಯರಿಗೂ ವಿಶೇಷ ಜವಾಬ್ದಾರಿಯಿದೆ. ಸಮಾವೇಶದ ಯಶಸ್ವಿಗಾಗಿ ನಾನಾ ಉಪ ಸಮಿತಿಗಳನ್ನು ರಚಿಸಲಾಗುತ್ತದೆ. ಜವಾಬ್ದಾರಿಗಳನ್ನು ಯುವ ವಾಹಿನಿಯ ಇತರ ಘಟಕಗಳಿಗೂ ಹಂಚಲಾಗುತ್ತದೆ. ಎಲ್ಲ ಸಮಿತಿಗಳ ಸಂಚಾಲಕರಾಗಿ ಪುತ್ತೂರು ಯುವವಾಹಿನಿ ಸದಸ್ಯರೇ ಕೆಲಸ ಮಾಡಲಿದ್ದಾರೆ ಎಂದರು.

ಸಭೆಯಲ್ಲಿ ಪುತ್ತೂರು ಯುವವಾಹಿನಿ ಘಟಕದ ಪದಾಧಿಕಾರಿಗಳು, ಸದಸ್ಯರು, ಮಾಜಿ ಅಧ್ಯಕ್ಷರುಗಳು, ಬಿಲ್ಲವ ಸಂಘ, ಬಿಲ್ಲವ ಮಹಿಳಾ ವೇದಿಕೆ, ಬಿಲ್ಲವ ವಿದ್ಯಾರ್ಥಿ ಸಂಘದ ಪ್ರಮುಖರು ಭಾಗವಹಿಸಿದ್ದರು. ಪುತ್ತೂರು ಯುವವಾಹಿನಿ ಘಟಕದ ಕಾರ್ಯದರ್ಶಿ ಪ್ರಶಾಂತ್ ಪಲ್ಲತ್ತಡ್ಕ ವಂದಿಸಿದರು.

ಉಪ ಸಮಿತಿಗಳಿಗೆ ಸಂಚಾಲಕರ ನೇಮಕ
ಯುವವಾಹಿನಿ ವಾರ್ಷಿಕ ಸಮಾವೇಶದ ಯಶಸ್ವಿಯಾಗಿ ನಾನಾ ಉಪ ಸಮಿತಿಗಳನ್ನು ರಚಿಸಿ ಅವುಗಳಿಗೆ ಸಂಚಾಲಕರನ್ನು ಆರಿಸಲಾಯಿತು. ಸಮಾವೇಶ ಸಂಚಾಲಕರಾಗಿ ನಾರಾಯಣ ಪೂಜಾರಿ ಕುರಿಕ್ಕಾರ, ಸ್ವಾಗತ ಸಮಿತಿಗೆ ಕೇಶವ ಪೂಜಾರಿ ಬೆದ್ರಾಳ, ಸಾಂಸ್ಕೃತಿಕ ಸಮಿತಿಗೆ ನಾಗೇಶ್ ಬಲ್ನಾಡ್, ಲೆಕ್ಕಪತ್ರ ಸಮಿತಿಗೆ ಚಂದ್ರಕಾಂತ ಶಾಂತಿವನ, ಊಟೋಪಚಾರ ಸಮಿತಿಗೆ ಜಯಂತ ಪೂಜಾರಿ ಕೆಂಗುಡೇಲು, ನಿಧಿ ಸಂಗ್ರಹ ಸಮಿತಿಗೆ ಹೊನ್ನಪ್ಪ ಪೂಜಾರಿ ಕೈಂದಾಡಿ, ಪ್ರಚಾರ ಸಮಿತಿಗೆ ನವೀನ್ ಕಲ್ಲುಗುಡ್ಡೆ, ವೇದಿಕೆ ಸಮಿತಿಗೆ ಜಯಂತ ಬಾಯಾರ್, ನೋಂದಣಿ ಸಮಿತಿಗೆ ಉದಯ ಕುಮಾರ್ ಕೋಲಾಡಿ, ಅಲಂಕಾರ ಸಮಿತಿಗೆ ಗೌರೀಶ್ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಯಿತು. ಪ್ರಚಾರ ಸಮಿತಿಯಲ್ಲಿ ಹೊರಾಂಗಣ ಪ್ರಚಾರಕ್ಕೆ ರವೀಂದ್ರ ಪೂಜಾರಿ ಸಂಪ್ಯ, ಮಾಧ್ಯಮ ಪ್ರಚಾರಕ್ಕೆ ಸುಧಾಕರ ಸುವರ್ಣ, ಸಾಮಾಜಿಕ ಜಾಲತಾಣ ವಿಭಾಗಕ್ಕೆ ಸಂತೋಷ್ ಕೆಯ್ಯೂರು, ವಿದ್ಯುನ್ಮಾನ ವಿಭಾಗಕ್ಕೆ ಪ್ರಶಾಂತ್ ಪಲ್ಲತ್ತಡ್ಕ ಮತ್ತು ಪ್ರಜ್ವಲ್ ಅವರನ್ನು ಸಹ ಸಂಚಾಲಕರನ್ನಾಗಿ ನೇಮಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.