ವಿಟ್ಲ: ಕಂಬಳಬೆಟ್ಟು ಉನ್ನತ ಹಿ.ಪ್ರಾ.ಶಾಲೆಯಲ್ಲಿ ಎಲ್.ಕೆ.ಜಿ ತರಗತಿಯ ಉದ್ಘಾಟನಾ ಸಮಾರಂಭ ಜೂ.8ರಂದು ನಡೆಯಿತು.
ವಿಟ್ಲಮುಡ್ನೂರು ಗ್ರಾ. ಪಂ ಅಧ್ಯಕ್ಷೆ ಪ್ರೇಮಲತಾಮರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಎಸ್.ಡಿ.ಎಂ.ಸಿ ಯ ಅಧ್ಯಕ್ಷ, ಗ್ರಾ.ಪಂ ಸದಸ್ಯರಾದ ಅಬ್ದುಲ್ ರಹಿಮಾನ್, ಮಹಾಬಲೇಶ್ವರ ಭಟ್, ಅಬ್ದುಲ್ ಅಜೀಜ್ ಬದ್ರಿಯಾ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ಬಿ.ಎ ಸ್ವಾಗತಿಸಿದರು. ಎಲ್.ಕೆ.ಜಿ ಶಿಕ್ಷಕಿ ಶಾಹಿನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಟಿ.ಜಿ.ಟಿ ಶಿಕ್ಷಕಿ ಪೂರ್ಣಿಮ ಎಸ್. ಕಮ್ಮಾಜೆ ವಂದಿಸಿದರು.
ಶಿಕ್ಷಕರುಗಳಾದ ಸುಮಿತ್ರ ಕೆ.ಎನ್, ಕುಶಲ ಕುಮಾರಿ, ಸುಜಾತ ಪಿ. ಮತ್ತು ಅಕ್ಷತ ಸಹಕರಿಸಿದರು. ಸಹಶಿಕ್ಷಕ ವಿ.ರಾಧಾಕೃಷ್ಣ ವರ್ಮ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಅಬ್ದುಲ್ ಅಜೀಜ್ ಬದ್ರಿಯಾರವರು ಕೊಡುಗೆಯಾಗಿ ನೀಡಿದ ನೋಟ್ಬುಕ್, ಬ್ಯಾಗ್ ಹಾಗೂ ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಯಿತು.