ಪುತ್ತೂರು: ಮಸೀದಿಗೆ ಹೋಗಿ ಬರುತ್ತಿದ್ದ ವ್ಯಕ್ತಿಯೋರ್ವರನ್ನು ತಿಂಗಳ ಹಿಂದೆ ಸಾಲ್ಮರ ಅಂಬೇಡ್ಕರ್ ವೃತ್ತದ ಬಳಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪುತ್ತೂರು ಪೊಲೀಸರು ಕಬಕದಲ್ಲಿ ಜೂ. 10ರಂದು ಬಂಧಿಸಿದ್ದಾರೆ.
ಸಾಲ್ಮರ ಅಂಬೇಡ್ಕರ್ ವೃತ್ತದ ಬಳಿ ಮೇ 22ರಂದು ರಾತ್ರಿ ಮಸೀದಿಗೆ ಹೋಗಿ ಹಿಂದಿರುಗುತ್ತಿದ್ದ ಚಿಕ್ಕಮುಡ್ನೂರು ಗ್ರಾಮದ ಗುಂಪಕಲ್ಲು ನಿವಾಸಿ ಅಬ್ದುಲ್ ಸತ್ತಾರ್ ಎಂಬವರ ಪುತ್ರ ಮಹಮ್ಮದ್ ಸಾದಿಕ್(21ವ)ರವರಿಗೆ ಅದ್ದುಪಡೀಲ್, ಇರ್ಷಾದ್ ಪೋಳ್ಯ, ಇಲ್ಯಾಸ್ ಪೋಳ್ಯ, ಇಕ್ಬಾಲ್ ಪೋಳ್ಯ, ಸಂಶುದ್ದೀನ್ ಪೋಳ್ಯ, ಇಕ್ಬಾಲ್ ಸಾಮೆತ್ತಡ್ಕ, ರಫೀಕ್ ಸಾಮೆತ್ತಡ್ಕರವರು ಹಲ್ಲೆ ನಡೆಸಿರುವ ಕುರಿತು ಆರೋಪಿಸಲಾಗಿತ್ತು. ಘಟನೆಯ ಕುರಿತು ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಅರೋಪಿಗಳ ಬಂಧನಕ್ಕಾಗಿ ತನಿಖೆ ಕೈಗೆತ್ತಿಕೊಂಡಿದ್ದು, ಜೂ.10ರಂದು ಬೆಳಿಗ್ಗೆ ವಿಟ್ಲದಿಂದ ಪುತ್ತೂರು ಕಡೆ ಮಾರುತಿ ಓಮ್ನಿಯಲ್ಲಿ ಬರುತ್ತಿದ್ದ ಆರೋಪಿಗಳ ಪೈಕಿ ಬಪ್ಪಳಿಗೆ ನಿವಾಸಿ ಅಬ್ದುಲ್ಖಾದರ್ ಅವರ ಪುತ್ರ ಅದ್ದು ಪಡೀಲ್ ಯಾನೆ ಅದ್ರಾಮ(44ವ), ಪೋಳ್ಯ ನಿವಾಸಿ ಇಸ್ಮಾಯಿಲ್ ಅವರ ಪುತ್ರ ಇಕ್ಬಾಲ್ ಪೋಳ್ಯ ಯಾನೆ ಮಹಮ್ಮದ್ ಇಕ್ಬಾಲ್ (22ವ), ಸಾಮೆತ್ತಡ್ಕ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ರಫೀಕ್ ಯಾನೆ ಮಹಮ್ಮದ್ ರಫೀಕ್(23ವ), ಕಬಕದ ಪೋಳ್ಯ ಮೂಲೆ ಕಾಡು ನಿವಾಸಿ ಸಂಶುದ್ದೀನ್ ಪೋಳ್ಯ ಯಾನೆ ಮಹಮ್ಮದ್ ಸಂಶುದ್ದೀನ್ (24ವ)ರವರನ್ನು ಪೊಲೀಸರು ಬಂಧಿಸಿದ್ದಾರೆ.